ಡೇಟಾ ಸಂರಕ್ಷಣಾ ಮಸೂದೆ-2022: ಡೇಟಾ ಸಂರಕ್ಷಿಸದಿದ್ದರೆ 500 ಕೋಟಿ ರೂಪಾಯಿ ವರೆಗೆ ದಂಡ ವಿಧಿಸಲು ಪ್ರಸ್ತಾಪ

ನವದೆಹಲಿ: ಭಾರತೀಯ ಪ್ರಜೆಗಳ ಡೇಟಾವನ್ನು (ಆಧಾರ್ ಸಂಖ್ಯೆ, ಮೊಬೈಲ್‌ ನಂಬರ್‌, ಬ್ಯಾಂಕ್‌ ಖಾತೆ ವಿವರ ಇತ್ಯಾದಿ) ಹೊಂದಿರುವ ಯಾವುದೇ ಕಂಪನಿಗಳು, ಆ ದತ್ತಾಂಶಗಳು ಅನ್ಯರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ಸೋರಿಕೆ ಮಾಡಿದರೆ ಅಥವಾ ದುರ್ಬಳಕೆ ಮಾಡಿಕೊಂಡರೆ ಹಾಗೂ ದತ್ತಾಂಶ ರಕ್ಷಣೆಯಲ್ಲಿ (ಡೇಟಾ ಪ್ರೊಟೆಕ್ಷನ್) ವಿಫಲವಾದವರಿಗೆ 500 ಕೋಟಿ ರೂ. ವರೆಗೆ ದಂಡ ವಿಧಿಸುವ ಬಗ್ಗೆ ದತ್ತಾಂಶ ರಕ್ಷಣಾ ಮಸೂದೆ-2022 ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಕೇಂದ್ರ ಸರ್ಕಾರವು ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ-2022 ಮಸೂದೆಯ ಪರಿಷ್ಕೃತ ಕರಡು ಸಿದ್ಧಪಡಿಸಿದ್ದು, ಡಿಸೆಂಬರ್‌ 17ರಿಂದ ಇದನ್ನು ಸಾರ್ವಜನಿಕರ ಆಕ್ಷೇಪಣೆಗಳು ಹಾಗೂ ವಿಮರ್ಶೆಗೆ ಇಡಲಾಗುತ್ತಿದ್ದು, ದೇಶದ ಜನರು ನೀಡುವ ಅಭಿಪ್ರಾಯ ಆಧರಿಸಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಇದೇ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ-2022 ಕರಡಿನಲ್ಲಿ, ಕಾನೂನುಬದ್ಧ ಉದ್ದೇಶಗಳಿಗಾಗಿ ಮತ್ತು ಇತರ ಪ್ರಾಸಂಗಿಕ ಉದ್ದೇಶಗಳಿಗಾಗಿ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ಅಗತ್ಯತೆಯಾಗಿದೆ ಎಂದು ವಿವರಣಾತ್ಮಕ ಟಿಪ್ಪಣಿ ನೀಡಲಾಗಿದೆ. ಇದು ಭಾರತೀಯ ಪ್ರಜೆಗಳ ಡೇಟಾವನ್ನು ಹೆಚ್ಚು ಸುರಕ್ಷಿತವಾಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
2019 ರಲ್ಲಿ ಸಿದ್ಧಪಡಿಸಲಾಗಿದ್ದ ಡೇಟಾ ಸಂರಕ್ಷಣೆ ಕರಡು ಮಸೂದೆಯಲ್ಲಿ, ಯಾವುದೇ ಟೆಕ್ ಕಂಪನಿಗಳು ದೇಶದ ನಾಗರಿಕರ ವೈಯಕ್ತಿಕ ದತ್ತಾಂಶಗಳನ್ನು ವಿದೇಶಗಳಿಗೆ ವರ್ಗಾಯಿಸುವಂತಿಲ್ಲ ಎಂದು ಹೇಳಲಾಗಿತ್ತು. ಯಾವುದೇ ಕಂಪೆನಿಯಾದರೂ ದೇಶದಲ್ಲೇ ಡೇಟಾವನ್ನು ಸಂರಕ್ಷಣೆ ಮಾಡಲು ಸೂಚಿಸಲಾಗಿತ್ತು. ಇದರಿಂದ ತೊಂದರೆ ಎದುರಾಗುವ ಬಗ್ಗೆ ದೈತ್ಯ ಟೆಕ್ ಕಂಪೆನಿಗಳ ಕಳವಳ ವ್ಯಕ್ತಪಡಿಸಿದ್ದವು. ಆದರೆ, ಆಯ್ದ ಕಂಪೆನಿಗಳಿಗೆ ಈ ವಿಷಯದಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement