ಇಸ್ರೊದಿಂದ ಪಿಎಸ್‌ಎಲ್‌ವಿ-ಸಿ54 ರಾಕೆಟ್, 8 ನ್ಯಾನೊ ಉಪಗ್ರಹ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು ಎಂಟು ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.
PSLV-C54 ಭೂಮಿಯ ವೀಕ್ಷಣಾ ಉಪಗ್ರಹ (EOS-06) ಅಥವಾ ಓಷನ್‌ಸ್ಯಾಟ್ ನ್ನು ಅದರ ಪ್ರಾಥಮಿಕ ಪೇಲೋಡ್ ಆಗಿ ಒಯ್ಯುತ್ತದೆ ಹಾಗೂ ಎಂಟು ಸಹ- ಉಪಗ್ರಹಗಳನ್ನು ಎರಡು ಗಂಟೆಗಳ ಕಾಲಾವಧಿಯಲ್ಲಿ ಸೂರ್ಯನ ಸಿಂಕ್ರೊನಸ್ ಕಕ್ಷೆಗಳಲ್ಲಿ ಇರಿಸಲಿದೆ.

ಭಾರತೀಯ ಕಾಲಮಾನ ಇಂದು, ಶನಿವಾರ ಬೆಳಗ್ಗೆ 11:56ಕ್ಕೆ ಉಡಾವಣೆಯಾಗಿದೆ. ಭೂಮಿಯ ವೀಕ್ಷಣಾ ಉಪಗ್ರಹ-6 ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ.

ಉಪಗ್ರಹಗಳನ್ನು ವಿವಿಧ ಎತ್ತರಗಳ ವಿವಿಧ ಕಕ್ಷೆಗಳಲ್ಲಿ ಇರಿಸಲು ವಿಜ್ಞಾನಿಗಳು ಹಲವಾರು ಕುಶಲತೆಯನ್ನು ಈ ಕಾರ್ಯಾಚರಣೆಯಲ್ಲಿ ಕೈಗೊಂಡಿದ್ದಾರೆ. ಇಸ್ರೋ ಕೈಗೊಂಡಿರುವ ಸುದೀರ್ಘ ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದಾಗಿದೆ. ಒಟ್ಟು ಕಾರ್ಯಾಚರಣೆಯ ಅವಧಿಯು ಸುಮಾರು 2 ಗಂಟೆಗಳು ಎಂದು ಅದು ತಿಳಿಸಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement