ಸ್ಟಾಫ್​ ಸೆಲೆಕ್ಷನ್ ಕಮಿಷನ್‌ನಿಂದ 24,369 ಕಾನ್ಸ್​ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ: ವಿದ್ಯಾರ್ಹತೆ 10ನೇ ತರಗತಿ, ನವೆಂಬರ್‌ 30 ಕೊನೆಯ ದಿನ

ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ 24,369 ಕಾನ್ಸ್​ಟೇಬಲ್(ಜಿಡಿ) ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 30, 2022ರೊಳಗೆ ಸ್ಟಾಫ್​ ಸೆಲೆಕ್ಷನ್ ಕಮಿಷನ್​(SSC)ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು.
ಹುದ್ದೆ- ಕಾನ್ಸ್​ಟೇಬಲ್
ಒಟ್ಟು ಸಂಖ್ಯೆ-24,369
ಮಾಸಿಕ ವೇತನ- 18,000-69,100 ರೂ.ಗಳು
ವಿದ್ಯಾರ್ಹತೆ-10ನೇ ತರಗತಿ

ಹುದ್ದೆಯ ಬಗ್ಗೆ
ಬಿಎಸ್​ಎಫ್-10,497
ಸಿಐಎಸ್​ಎಫ್​-100
ಸಿಆರ್​ಪಿಎಫ್​-8911
ಎಸ್​ಎಸ್​ಬಿ-1284
ಐಟಿಬಿಪಿ-1613
ಎಆರ್-1697
ಎಸ್​ಎಸ್​ಎಫ್​-103
ಎನ್​ಸಿಬಿ-164
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ:ಸ್ಟಾಫ್​ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಇರಬೇಕು. ಎಸ್​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಾಗೂ ಒಬಿಸಿ/ ಮಾಜಿ ಸರ್ವೀಸ್​ಮೆನ್ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಮಹಿಳಾ/ಎಸ್​​ಸಿ/ಎಸ್​ಟಿ/ಇಎಸ್​ಎಂ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ. ಉಳಿದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದೆ.
ಪಾವತಿಸುವ ಬಗೆ: ಆನ್​ಲೈನ್​​​/ಎಸ್​ಬಿಐ ಚಲನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2022
ಅರ್ಜಿ ಶುಲ್ಕ ಪಾವತಿಸಲು ಕೊನೇ ದಿನ: 01-12-2022
ಕಂಪ್ಯೂಟರ್ ಆಧಾರಿತ ಪರೀಕ್ಷೆ : ಜನವರಿ 2023

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

 

 

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement