ತೆಲಂಗಾಣ ಸಿಎಂ ಕೆಸಿಆರ್ ವಿರುದ್ಧ ಪ್ರತಿಭಟನೆಗೆ ಹೋಗುತ್ತಿದ್ದ ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ಶರ್ಮಿಳಾ ಕಾರನ್ನು ಅವರು ಒಳಗೆ ಕುಳಿತಿದ್ದಾಗಲೇ ಎಳೆದೊಯ್ದ ಹೈದರಾಬಾದ್ ಪೊಲೀಸರು | ವೀಕ್ಷಿಸಿ

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರು ತಮ್ಮ ಕಾರಿನ ಒಳಗೆ ಕುಳಿತಿರುವಾಗಲೇ ನಗರ ಪೊಲೀಸರು ಕ್ರೇನ್‌ ತಂದು ಕಾರನ್ನು ಎಳೆದೊಯ್ದ ಆಘಾತಕಾರಿ ಘಟನೆ ಹೈದರಾಬಾದ್‌ನ ಆರ್ಟಿರಿಯಲ್ ರಸ್ತೆಯಲ್ಲಿ ಇಂದು, ಮಂಗಳವಾರ ನಡೆದಿದೆ.
ಶರ್ಮಿಳಾ ಅವರು ಕಾರಿನಿಂದ ಹೊರಬರಲು ನಿರಾಕರಿಸಿದ ಕಾರಣ ಪೊಲೀಸ್ ಠಾಣೆಯಲ್ಲಿ ಹೈ ಡ್ರಮಾ ನಡೆಯಿತು ಮತ್ತು ಎಸ್‌ಯುವಿಯ ಬಾಗಿಲು ತೆರೆಯಲು ಅರದ ಲಾಕ್‌ ತೆರೆಯುವವರನ್ನು ಕರೆತರಬೇಕಾಯಿತು. ಶರ್ಮಿಳಾ ಅವರ ತಾಯಿ ವೈಎಸ್ ವಿಜಯಲಕ್ಷ್ಮಿ ಅವರು ತಮ್ಮ ಮಗಳನ್ನು ಭೇಟಿಯಾಗಲು ಹೈದರಾಬಾದ್‌ನಲ್ಲಿರುವ ಮನೆಯಿಂದ ಹೊರಬರಲು ಪ್ರಯತ್ನಿಸಿದ್ದರಿಂದ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಅವರ ಬೆಂಬಲಿಗರು ಮತ್ತು ವಾರಂಗಲ್‌ನಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಕರ್ತರ ನಡುವಿನ ಘರ್ಷಣೆಯ ನಂತರ ನಿನ್ನೆ ಶರ್ಮಿಳಾ ಅವರನ್ನು ಸ್ವಲ್ಪ ಸಮಯದವರೆಗೆ ಬಂಧಿಸಲಾಗಿತ್ತು.
ಇಂದು ಬೆಳಿಗ್ಗೆ ನಿನ್ನೆಯ ಘರ್ಷಣೆಯಲ್ಲಿ ಹಾನಿಗೊಳಗಾದ ಕಾರಿನ ಚಾಲಕನ ಸೀಟಿನಲ್ಲಿ ಕುಳತ ಶರ್ಮಿಳಾ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸವಾದ ಪ್ರಗತಿ ಭವನಕ್ಕೆ ಹೋಗಲು ಪ್ರಯತ್ನಿಸಿದರು.

ಕ್ರೇನ್ ಕಾರನ್ನು ಎಳೆಯುತ್ತಿರುವಾಗ ಶರ್ಮಿಳಾ ಅವರು ಕಾರಿನಲ್ಲಿ ಕುಳಿತಿರುವುದನ್ನು ವೀಡಿಯೊಗಳು ತೋರಿಸಿವೆ. ಸೋಮವಾರದ ಘರ್ಷಣೆಯಲ್ಲಿ ಹಾನಿಗೊಳಗಾದ ವಾಹನದ ವಿಂಡ್ ಶೀಲ್ಡ್ ಅನ್ನು ಸಹ ದೃಶ್ಯಗಳು ತೋರಿಸುತ್ತವೆ. ಸೋಮವಾರ ವಾರಂಗಲ್ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ಟಿಆರ್‌ಎಸ್ ಗೂಂಡಾಗಳು ತಮ್ಮ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ರಕ್ತಸಿಕ್ತ ದಾಳಿಯ ವಿರುದ್ಧ ಪ್ರತಿಭಟನೆ ಮತ್ತು ಖಂಡನಾರ್ಥ ಪ್ರತಿಭಟನೆ ನಡೆಸಲು ಶರ್ಮಿಳಾ ಅವರು ಮುಖ್ಯಮಂತ್ರಿಯವರ ನಿವಾಸಕ್ಕೆ ತೆರಳುತ್ತಿದ್ದರು ಎಂದು ಅವರ ಪಕ್ಷದ ಟಿಪ್ಪಣಿ ಹೇಳಿದೆ.
ಶರ್ಮಿಳಾ ನಿನ್ನೆಯ ಘರ್ಷಣೆಯಲ್ಲಿ ಹೆಚ್ಚು ಹಾನಿಗೊಳಗಾದ ಕಾರಿನಲ್ಲಿ ಜೊತೆಗೆ ತೆರಳುತ್ತಿದ್ದಂತೆ, ಹೈದರಾಬಾದ್ ಪೊಲೀಸರು ಅವರನ್ನು ತಡೆದು ಅವರ ವಾಹನವನ್ನು ಎಸ್‌ಆರ್ ನಗರ ಪೊಲೀಸ್ ಠಾಣೆಗೆ ಎಳೆದೊಯ್ದರು.
ಶರ್ಮಿಳಾ ಅವರ ವೈಎಸ್‌ಆರ್ ತೆಲಂಗಾಣ ಪಕ್ಷ ಆರಂಭಿಸಿದ ನಂತರ ಆರಂಭಿಸಿದ ಪಾದಯಾತ್ರೆ ಇದುವರೆಗೆ 3,500 ಕಿ.ಮೀ ಕ್ರಮಿಸಿದೆ. ಶರ್ಮಿಳಾ ಅವರು ಕೆಸಿಆರ್ ನೇತೃತ್ವದ ಸರ್ಕಾರವನ್ನು ಭಾರೀ ಭ್ರಷ್ಟಾಚಾರದ ಆರೋಪಕ್ಕೆ ಪದೇ ಪದೇ ಗುರಿಯಾಗಿಸಿದ್ದಾರೆ.
ಭಾನುವಾರ ನರಸಂಪೇಟೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಅವರ ಕಾಮೆಂಟ್‌ಗಳು ಕೆಸಿಆರ್ ನೇತೃತ್ವದ ಪಕ್ಷದ ಕಾರ್ಯಕರ್ತರನ್ನು ಕೆರಳಿಸಿತು ಮತ್ತು ಅವರು ವೈಎಸ್‌ಆರ್ ತೆಲಂಗಾಣ ಪಕ್ಷದ ವಾಹನಗಳ ಮೇಲೆ ದಾಳಿ ಮಾಡಿದರು, ಇದು ಘರ್ಷಣೆಗೆ ಕಾರಣವಾಯಿತು.

ನನ್ನನ್ನು ಏಕೆ ಬಂಧಿಸುತ್ತಿದ್ದೀರಿ? ನಾನು ಇಲ್ಲಿ ಆರೋಪಿಯಲ್ಲ” ಎಂದು ಶರ್ಮಿಳಾ ಅವರು ನಿನ್ನೆ ತಮ್ಮನ್ನು ಮತ್ತು ಬೆಂಬಲಿಗರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಕೂಗಾಡಿದ್ದು ಕೇಳಿಸಿತು. ಘರ್ಷಣೆಯ ನಂತರ, ರಾಜ್ಯ ಪೊಲೀಸರು ಪಾದಯಾತ್ರೆಗೆ “ತಾತ್ಕಾಲಿಕವಾಗಿ ಅನುಮತಿಯನ್ನು ರದ್ದುಗೊಳಿಸಿದರು” ಮತ್ತು ಶರ್ಮಿಳಾ ಅವರನ್ನು ಪೊಲೀಸ್ ಬೆಂಗಾವಲು ಜೊತೆ ಹೈದರಾಬಾದ್‌ಗೆ ಕಳುಹಿಸಿದರು. ಅವರನ್ನು ಬಂಧಿಸಲಾಗಿದೆ ಎಂಬ ಪಕ್ಷದ ಆರೋಪವನ್ನು ಹಿರಿಯ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ.
ಳೆದ 223 ದಿನಗಳಿಂದ, ನಾನು ಮತ್ತು ನನ್ನ ಪಕ್ಷದ ನಾಯಕರು ತೆಲಂಗಾಣದಲ್ಲಿ ಜನರ ಸಂಕಷ್ಟಗಳಿಗೆ ಧ್ವನಿಯಾಗಲು ಶಾಂತಿಯುತ ಪಾದಯಾತ್ರೆ ನಡೆಸುತ್ತಿದ್ದೇವೆ. “ನಮ್ಮ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಮುಖ್ಯಮಂತ್ರಿ ಕೆಸಿಆರ್ ಮತ್ತು ಅವರ ಪಕ್ಷದವರನ್ನು ಕುಗ್ಗಿಸಿದೆ. ಹಾಗೂ ಅವರು ನನ್ನನ್ನು ತಡೆಯಲು ಪ್ರಯತನಿಸುತ್ತಿದ್ದಾರೆ ಎಂದು ಶರ್ಮಿಳಾ ನಿನ್ನೆ ಹೇಳಿದ್ದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪಾದಯಾತ್ರೆಗೆ ರಾಜ್ಯ ಪೊಲೀಸರು ಅನುಮತಿ ನಿರಾಕರಿಸಿದ ನಂತರ ತೆಲಂಗಾಣ ರಾಜಕಾರಣಿ ವಿರುದ್ಧ ಇಂದಿನ ಪೊಲೀಸ್ ಕ್ರಮ ಬಂದಿದೆ. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಸಾಗುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement