ಯಲ್ಲಾಪುರ: ಅರೆಬೈಲ್‌ ಘಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣ: ಮೂವರು ಅಂತಾರಾಜ್ಯ ಕಳ್ಳರ ಬಂಧನ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಸರಗೋಡಿನ ಸಿರಿಯಾದ ಮಹಮ್ಮದ್ ಕಬೀರ್ ಮೈನುದ್ದೀನ್, ಕೋಜಿಕೋಡಿನ ಸುಭಾಸ ರಾಧಾಕೃಷ್ಣನ್ ಹಾಗೂ ಪಾಲಕ್ಕಾಡಿನ ನಿವೇಶ ಅಪ್ಪು ವಿಜಯಕೃಷ್ಣನ್ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಕಳೆದ ಅಕ್ಟೋಬರ್ 2ರಂದು ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಕೊಲ್ಲಾಪುರದ ನೀಲೇಶ ಪಾಂಡುರಂಗ ನಾಯ್ಕ ಅವರಿಗೆ ಸೇರಿದ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಕಾರು ಹಾಗೂ ಕಾರಿನಲ್ಲಿದ್ದ 2.11 ಕೋಟೊ ರೂ, ಎರಡು ಮೊಬೈಲ್ ಗಳನ್ನು ಸಿನಿಮಿಯ ಮಾದರಿಯಲ್ಲಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ಅವರಿಂದ ಮೂರು ಕಾರು, 98,000 ರೂ ನಗದು ವಶಪಡಿಸಿಕೊಂಡಿದ್ದಾರೆ.

ಕೃತ್ಯದಲ್ಲಿ 20 ಕ್ಕೂ ಹೆಚ್ಚು ಅಂತಾರಾಜ್ಯ ದರೋಡೆಕೋರರು ಭಾಗಿಯಾಗಿರುವುದಾಗಿ ತನಿಖೆ ವೇಳೆ ಹೇಳಿದ್ದಾರೆ ಎನ್ನಲಾಗಿದ್ದು, ಉಳಿದವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಎಸ್.ಪಿ ವಿಷ್ಣುವರ್ಧನ್, ಡಿವೈಎಸ್.ಪಿ ರವಿ ನಾಯ್ಕ ಶಿರಸಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ, ಪಿಎಸ್ಐಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ ಅತ್ತಾರ, ಪ್ರೊಬೇಶನರಿ ಪಿಎಸ್ಐ ಉದಯ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ಡ್ಯಾನಿ ಫರ್ನಾಂಡೀಸ್, ರಾಜೇಶ ನಾಯ್ಕ, ಪರಶುರಾಮ ಕಾಳೆ, ದೀಪಕ್,ಪ್ರವೀಣ ಪೂಜಾರ, ಚೆನ್ನಕೇಶವ, ಗಿರೀಶ, ನಂದೀಶ, ಸುಕ್ರಪ್ಪ, ಶೇಷು, ವಿಜಯ, ಶೋಭಾ ನಾಯ್ಕ, ಸಿಡಿಆರ್ ಸೆಲ್ ನ ಉದಯ, ರಮೇಶ, ಯೋಗೇಶ ಕಾರ್ಯಾಚರಣೆಯಲ್ಲಿ ಇದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement