ಶಾಲೆಯ ಶಾಕರ್: ‌ ಬೆಂಗಳೂರಿನ ವಿದ್ಯಾರ್ಥಿಗಳ ಬ್ಯಾಗ್ ದಿಢೀರ್ ತಪಾಸಣೆ ವೇಳೆ ಕಾಂಡೋಮ್, ಗರ್ಭನಿರೋಧಕಗಳು, ಮದ್ಯ ಪತ್ತೆ…!

ಬೆಂಗಳೂರು: ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಮೊಬೈಲ್ ಫೋನ್‌ಗಳ ತಪಾಸಣೆ ನಡೆಸಿದಾಗ ನಗರದ ಶಾಲೆಗಳ ಸಿಬ್ಬಂದಿ ವಿದ್ಯಾರ್ಥಿಗಳ ಪೋಷಕರನ್ನು ಬೆಚ್ಚಿಬೀಳಿಸುವ ಸಂಗತಿಗಳನ್ನು ಕಂಡುಹಿಡಿದಿದ್ದಾರೆ. ಮೊಬೈಲ್ ಫೋನ್‌ಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಬ್ಯಾಗ್‌ಗಳಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ಹೆಚ್ಚಿನ ಪ್ರಮಾಣದ ಹಣ ಇರುವುದನ್ನು ಪತ್ತೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತಂದಿರುವ ಬಗ್ಗೆ ಶಾಲಾ ಅಧಿಕಾರಿಗಳಿಗೆ ದೂರುಗಳು ಬಂದಿದ್ದರಿಂದ ಶೋಧ ನಡೆಸಲಾಯಿತು. ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಶಾಲೆಗಳು (ಕೆಎಎಂಎಸ್) ಕೂಡ ತಮ್ಮ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಶಾಲೆಯವರಿಗೆ ಸೂಚಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದರಿಂದ ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಆಯಾ ಶಾಲಾ ಶಿಕ್ಷಕರು ಪರಿಶೀಲಿಸಿದರು. ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಇವೆಲ್ಲ ಕಂಡುಬಂದ ನಂತರ ಪೋಷಕರ ಸಭೆಗಳನ್ನು ಕರೆಯಲಾಯಿತು. ಪಾಲಕರೂ ಅಷ್ಟೇ ಆಘಾತಕ್ಕೆ ಒಳಗಾಗಿದ್ದಾರೆ ಎಂದು ನಾಗರಭಾವಿಯ ಶಾಲೆಯೊಂದರ ಪ್ರಾಚಾರ್ಯರೊಬ್ಬರು ತಿಳಿಸಿದರು. ಪಾಲಕರು ತಮ್ಮ ಮಕ್ಕಳ ನಡವಳಿಕೆಯಲ್ಲಿ ಹಠಾತ್ ಬದಲಾವಣೆಗಳನ್ನು ಗಮನಿಸುತ್ತಿದ್ದಾರೆ ಎಂದು ಅವರು ಶಾಲಾ ಶಿಕ್ಷಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಪರಿಸ್ಥಿತಿ ಸೂಕ್ಷ್ಮವಾಗಿದ್ದ ಕಾರಣ, ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬದಲು ಮಕ್ಕಳಿಗೆ ಕೌನ್ಸೆಲಿಂಗ್‌ ಮಾಡುವಂತೆ ಸೂಚಿಸಿದ್ದಾರೆ.
10 ನೇ ತರಗತಿಯ ಬಾಲಕಿಯ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾಗಿದೆ ಎಂದು ಮತ್ತೊಂದು ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ, “ಪ್ರಶ್ನೆ ಮಾಡಿದಾಗ, ಅವಳು ತನ್ನ ಸಹಪಾಠಿಗಳನ್ನು ಅಥವಾ ಅವಳು ಹೋಗುವ ಖಾಸಗಿ ಟ್ಯೂಷನ್‌ನಲ್ಲಿರುವವರನ್ನು ದೂಷಿಸಿದ್ದಾಲೆ ಎಂದು ಹೇಳಿದರು.
80 ರಷ್ಟು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಬ್ಯಾಗ್‌ಗಳ ತಪಾಸಣೆ ನಡೆಸಿದಾಗ, ಒಬ್ಬ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗರ್ಭನಿರೋಧಕಗಳು (ಐ-ಪಿಲ್) ಮತ್ತು ನೀರಿನ ಬಾಟಲಿಗಳಲ್ಲಿ ಮದ್ಯವಿತ್ತು ಎಂದು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಸಹಪಾಠಿಗಳಿಗೆ ಕಿರುಕುಳ ನೀಡುವುದು, ಅಸಭ್ಯ ಭಾಷೆ, ಬೆದರಿಸುವುದು ಮತ್ತು ಕೆಟ್ಟ ಸನ್ನೆಗಳನ್ನು ಮಾಡುವುದು ಕಂಡುಬಂದಿದೆ. 5ನೇ ತರಗತಿಯ ಮಕ್ಕಳಲ್ಲೂ ಇಂತಹ ವರ್ತನೆ ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement