ಕುಮಟಾ : ಡಿಸೆಂಬರ್‌ 4ರಿಂದ ಡಾ. ಬಾಳಿಗಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ

ಕುಮಟಾ : ರಾಜ್ಯ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದ ಫ್ಲೋರ್ ಬಾಲ್ ಪಂದ್ಯಾಟವು ಡಿಸೆಂಬರ್‌ 4, ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ರಾಜ್ಯದ ಒಟ್ಟು 25 ತಂಡದ 450 ವಿದ್ಯಾರ್ಥಿಗಳು ಹಾಗೂ ತಂಡಗಳ ವ್ಯವಸ್ಥಾಪಕರಾಗಿ 50 ಉಪನ್ಯಾಸಕರು ಭಾಗವಹಿಸಲಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಹನುಮಂತಪ್ಪ ನಿಟ್ಟೂರ ಅವರು ಡಾ ಎ. ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫ್ಲೋರ್ ಬಾಲ್ ಪಂದ್ಯಾಟವು ಜಿಲ್ಲೆಯಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪ್ರತಿ ತಂಡದಲ್ಲಿ 7 ಆಟಗಾರರು ಇರುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಆಟಗಾರರರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ, ವಿದ್ಯಾರ್ಥಿನಿಯರಿಗೆ ನಿರ್ಮಲಾ ಕಾನ್ವೆಂಟ್ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಸರಕಾರಿ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಡಾ. ಬಾಳಿಗಾ ಮಹಾವಿದ್ಯಾಲಯದಲ್ಲಿ ಈ ಆಟದ ಪಂದ್ಯಾಟಕ್ಕೆ ಬೇಕಾಗುವ ವಿಶೇಷ ಕ್ರೀಡಾಂಗಣ ಇರುವುದರಿಂದ ಇಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿ ಯಶಸ್ಸಿಗೆ ಜಿಲ್ಲೆಯಾದ್ಯಂತ ಇರುವ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬ್ಬಂದಿ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

ಡಿಸೆಂಬರ್‌ 4 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವರಾದ ಶಿವರಾಮ ಹೆಬ್ಬಾರ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪದವಿ ಪೂರ್ವ ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಪ್ರಾಚಾರ್ಯ ಸತೀಶ ನಾಯ್ಕ, ಜಿಲ್ಲಾ ಕ್ರೀಡಾ ಸಂಘಟನಾ ಕಾರ್ಯದರ್ಶಿ ಪ್ರಾಚಾರ್ಯರಾದ ಎಂ. ಎಚ್. ಭಟ್ಟ. ಪ್ರಾಚಾರ್ಯರಾದ ಡಾ. ಎಸ್. ವಿ. ಶೇಣ್ವಿ, .ಪ್ರೊ. ಹೇಮಾ ಪೈ, ಜಿಲ್ಲಾ ಕ್ರೀಡಾ ಸಂಚಾಲಕ ಕಿರಣ್ ಗಾಂವಕರ ಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement