ರೈಲು ಹಳಿ ಮೇಲೆ ಪೊಲೀಸರು ಎಸೆದ ತನ್ನ ತೂಕದ ಮಾಪನ ಯಂತ್ರ ತರಲು ಹೋದಾಗ ರೈಲು ಡಿಕ್ಕಿ ಹೊಡೆದು ಕಾಲು ಕಳೆದುಕೊಂಡ ಯುವಕ

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 18 ವರ್ಷದ ತರಕಾರಿ ಮಾರಾಟಗಾರನೊಬ್ಬ ಶುಕ್ರವಾರ ರೈಲಿಗೆ ಸಿಲುಕಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದು, ಪೊಲೀಸರು ರೈಲ್ವೆ ಹಳಿ ಮೇಲೆ ಎಸೆದ ತನ್ನ ತೂಕ ಮಾಪಕ ಯಂತ್ರವನ್ನು ತರಲು ಹೋದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಕಾನ್ಪುರದ ರೈಲ್ವೆ ನಿಲ್ದಾಣದ ಬಳಿ ಹೆಚ್ಚಾಗಿ ತರಕಾರಿ ಮಾರಾಟಗಾರರು ಒತ್ತುವರಿ ಮಾಡಿಕೊಂಡಿರುವ ಅತಿಕ್ರಮಣಗಳನ್ನು ಪೊಲೀಸರು ತೆರವುಗೊಳಿಸುತ್ತಿರುವ ವೇಳೆ ಈ ಘಟನೆ ಘಟಿಸಿದೆ ಎಂದು ವರದಿಯಾಗಿದೆ.
ಕಾನ್ಪುರದ ಕಲ್ಯಾಣಪುರ ಪ್ರದೇಶದ ಸಾಹಿಬ್ ನಗರದ ನಿವಾಸಿ ಅರ್ಸಲಾನ್ ಎಂಬಾತ ಜಿಟಿ ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾಗ ಇಬ್ಬರು ಪೊಲೀಸರು ಆತನ ಬಳಿಗೆ ಬಂದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಅರ್ಸಲಾನ್‌ನನ್ನು ಹೊಡೆದ ನಂತರ ಹೆಡ್ ಕಾನ್‌ಸ್ಟೆಬಲ್ ರಾಕೇಶ್ ಎಂಬವರು ಆತ ಇಟ್ಟುಕೊಂಡಿದ್ದ ತರಕಾರಿ ತೂಕದ ಮಾಪಕವನ್ನು ರಳ್ವೆ ಹಳಿಗಳ ಮೇಲೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ಅರ್ಸಲನ್ ಹಳಿಗಳ ಮೇಲೆ ಬಿದ್ದ ತೂಕ ಮಾಪಕಗಳನ್ನು ಮರಳಿ ತರಲು ಆತುರದಿಂದ ಹೋದಾಗ ಮುಂಬರುವ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ ಮತ್ತು ಅವರ ಕಾಲುಗಳು ತುಂಡಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ ಸ್ಥಳೀಯರು ರೆಕಾರ್ಡ್ ಮಾಡಿದ ವೀಡಿಯೊಗಳಲ್ಲಿ, 18 ವರ್ಷದ ಯುವಕ ಹಳಿಗಳ ಮೇಲೆ ಮಲಗಿರುವುದನ್ನು ಮತ್ತು ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿರುವುದನ್ನು ತೋರಿಸುತ್ತದೆ. ಇಬ್ಬರು ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಶುಕ್ರವಾರ ಪೊಲೀಸರು ಜಿಟಿ ರಸ್ತೆಯ ಬಳಿ ಅತಿಕ್ರಮಣಗಳನ್ನು ತೆಗೆಯುತ್ತಿದ್ದಾಗ ಹೆಡ್ ಕಾನ್‌ಸ್ಟೆಬಲ್ ರಾಕೇಶ್ ಬೇಜವಾಬ್ದಾರಿಯಿಂದ ವರ್ತಿಸಿದರು ಮತ್ತು ಅರ್ಸಲನ್ ರೈಲಿಗೆ ಸಿಲುಕಿದರು. ರಾಕೇಶ್ ಕುಮಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಮತ್ತು ನಾವು ಈ ವಿಷಯವನ್ನು ತನಿಖೆ ಮಾಡುತ್ತೇವೆ. ಪ್ರತ್ಯಕ್ಷದರ್ಶಿಗಳು ದಾಖಲಿಸಿದ ಘಟನೆಯ ವೀಡಿಯೊಗಳನ್ನು ಸಹ ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಧುಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement