ವಿಕಲಚೇತನರಿಗೆ ಆರೋಗ್ಯ ಸಿರಿ ವಿಶೇಷ ಯೋಜನೆ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಅಂಗವಿಕಲರಿಗಾಗಿ ರಾಜ್ಯ ಸರ್ಕಾರ ಆರೋಗ್ಯ ಸಿರಿ ವಿಶೇಷ ಯೋಜನೆ ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ರಾಜ್ಯದ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂಗವಿಕಲ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯಾದ ಆರೋಗ್ಯ ಸಿರಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದರು.

ವಿಕಲಚೇತನರಿಗೆ ಮೀಸಲಾತಿ ಪ್ರಮಾಣ 3% ನೀಡಲಾಗುವುದು. ಬುದ್ಧಿಮಾಂಧ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್ ಶಾಪ್ ಗಳನ್ನ ಮಾಡುವ ತೀರ್ಮಾನ ಮಾಡುತ್ತೇನೆ. ಹಾಗೆಯೇ, ಸರ್ಕಾರಿ ಮನೆಗಳನ್ನು ಹಂಚಿಕೆ ಮಾಡುವಾಗಲೂ ಅಂಗವಿಕಲರಿಗೆ ಮೀಸಲಾತಿ ನೀಡಲಾಗುವುದು ಎಂದರು.
ಅಂಗವಿಕಲರಿಗೆ ದ್ವಿಚಕ್ರ ಮೋಟಾರು ವಾಹನಗಳನ್ನು ನೀಡಲು ಈಗಿರುವ 15 ಕೋಟಿ ರೂ. ಜತೆಗೆ ಇನ್ನೂ 22 ಕೋಟಿ ರೂ.ಗಳನ್ನು ಒದಗಿಸಿ 2 ಸಾವಿರ ಅಂಗವಿಕಲರಿಗೆ ಮೋಟಾರು ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದರು. ಅಲ್ಲದೆ, ಮುಂದಿನ ಬಜೆಟ್‌ನಲ್ಲಿ ಅಂಗವಿಕಲರಿಗೆ ವಿಶೇಷ ಅನುದಾನವನ್ನು ಒದಗಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement