ಬಾತ್‌ರೂಮಿನಲ್ಲಿ ವಿಷಕಾರಿ ಬೃಹತ್‌ ಕಾಳಿಂಗ ಸರ್ಪಕ್ಕೆ ‘ಸ್ನಾನ’ ಮಾಡಿಸುತ್ತಿರುವ ವ್ಯಕ್ತಿಯ ವೀಡಿಯೊ ವೈರಲ್‌ : ಬೆಚ್ಚಿಬಿದ್ದ ಇಂಟರ್ನೆಟ್ | ವೀಕ್ಷಿಸಿ

ಇಂಟರ್ನೆಟ್‌ನಲ್ಲಿ ಬೆಚ್ಚಿಬೀಳುವ ವೀಡಿಯೊವೊಂದು ವೈರಲ್‌ ಆಗಿದ್ದು, ಅತ್ಯಂತ ವಿಷಕಾರಿ ಬೃಹತ್‌ ಕಾಳಿಂಗ ಸರ್ಪಕ್ಕೆ ವ್ಯಕ್ತಿಯೊಬ್ಬ ಸ್ನಾನ’ ಮಾಡಿಸುತ್ತಿರುವ ವಿಸ್ಮಯಕಾರಿ ದೃಶ್ಯದ ವೀಡಿಯೊ ಈಗ ಭಾರೀ ಸುದ್ದು ಮಾಡುತ್ತಿದೆ.
ದಿನಾಂಕವಿಲ್ಲದ ಈ ಕ್ಲಿಪ್‌ನಲ್ಲಿ ವ್ಯಕ್ತಿಯು ತನ್ನ ಬಾತ್‌ರೂಮಿಲ್ಲಿ ಕಾಳಿಂಗ ಸರ್ಪವನ್ನು ಯಾವುದೇ ಭಯ ಅಥವಾ ಅಂಜಿಕೆಯಿಲ್ಲದೆ ಹಾವಿನ ಮೈ ತೊಳೆದು ಸ್ನಾನ ಮಾಡಿಸುವುದನ್ನು ತೋರಿಸುತ್ತದೆ.
ಈ ವಿಡಿಯೋವನ್ನು @Gulzar_sahab ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 22 ಸೆಕೆಂಡ್‌ಗಳ ವೀಡಿಯೊವು ಬಾತ್‌ರೂಮ್‌ನಲ್ಲಿ ವ್ಯಕ್ತಿ ಹಾಗೂ ಮತ್ತು ಕಾಳಿಂಗ ಸರ್ಪವನ್ನು ತೋರಿಸುತ್ತದೆ, ಅಲ್ಲಿ ವ್ಯಕ್ತಿಯು ನೀರು ತುಂಬಿದ ಬಕೆಟ್‌ನಿಂದ ಮಗ್‌ನಲ್ಲಿ ನೀರನ್ನು ಹಾವಿನ ಸುರಿಯುತ್ತಿದ್ದನು. ಅದರ ಮೈ ಸವರಿ ಸ್ನಾನ ಮಾಡಿಸುತ್ತಿರುವುದು ಕಂಡುಬರುತ್ತದೆ. ಒಂದು ಹಂತದಲ್ಲಿ, ಮನುಷ್ಯ ಮಾರಣಾಂತಿಕ ಹಾವಿನ ತಲೆಯನ್ನು ಹಿಡಿದಿದ್ದಾನೆ ವೀಡಿಯೊದ ಕೊನೆಯಲ್ಲಿ, ನಾಗರ ಹಾವು ತಾನೇ ಚೊಂಬು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಶುಕ್ರವಾರ ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಟ್ವಿಟರ್‌ನಲ್ಲಿ 24,000 ಕ್ಕೂ ಹೆಚ್ಚು ವೀಕ್ಷಣೆಗಳು, 716 ಲೈಕ್‌ಗಳು ಮತ್ತು ಡಜನ್ಗಟ್ಟಲೆ ದಿಗ್ಭ್ರಮೆಗೊಂಡ ಕಾಮೆಂಟ್‌ಗಳು ವ್ಯಕ್ತವಾಗಿದೆ. ಕೆಲವರು ಈ ವಿಲಕ್ಷಣ ದೃಶ್ಯವನ್ನು ನೋಡಿ ಆಶ್ಚರ್ಯಪಟ್ಟರು.ಬಳಕೆದಾರರೊಬ್ಬರು”ಈ ಭೂಮಿಯಲ್ಲಿ ಹುಚ್ಚು ಜನರ ಕೊರತೆಯಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ವಿಶ್ವದ ಅತ್ಯಂತ ವಿಷಕಾರಿ ಹಾವು ಕಾಳಿಂಗ ಸರ್ಪ ಎಲ್ಲಾ ಸರ್ಪಗಳಿಂತ ಉದ್ದವಾಗಿರುತ್ತದೆ. ವಯಸ್ಕ ಕಾಳಿಂಗ ಸರ್ಪವು 15-16 ಅಡಿಗಳ ವರೆಗೂ ಉದ್ದವಿರುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಕಾಳಿಂಗ ಸರ್ಪ ಒಂದೇ ಕಡಿತದಲ್ಲಿ ನೀಡಬಹುದಾದ ನ್ಯೂರೋಟಾಕ್ಸಿನ್ ಪ್ರಮಾಣವು 20 ಜನರನ್ನು ಕೊಲ್ಲಲು ಸಾಕಾಗುತ್ತದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement