ಬೆಂಗಳೂರು: ದೆಹಲಿಯ ಶದ್ಧಾ ವಾಕರ್ ಕೊಲೆ ಪ್ರಕರಣಕ್ಕೆ ಹೋಲುವಂತೆ ವೃದ್ಧೆಯೊಬ್ಬಳನ್ನು ಕೊಂದು ಶವವನ್ನು ಬೀರುವಿನಲ್ಲಿಟ್ಟು ಮಹಿಳೆಯೊಬ್ಬರು ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಪಾರ್ವತಮ್ಮ (65 ವರ್ಷ) ಎಂದು ಗುರುತಿಸಲಾಗಿದೆ. ಅತ್ತಿಬೆಲೆ ಗ್ರಾಮದಲ್ಲಿ ಮನೆಯೊಂದರ 4ನೇ ಮಹಡಿಯಲ್ಲಿ ಮುಸ್ಲಿಂ ಮಹಿಳೆ ಬಾಡಿಗೆಗೆ ಇದ್ದಳು. 3ನೇ ಮಹಡಿಯಲ್ಲಿ ಪಾರ್ವತಮ್ಮ ಕುಟುಂಸ್ಥರು ವಾಸವಾಗಿದ್ದರು. ಮೂರು ದಿನಗಳ ಹಿಂದೆ ಮುಸ್ಲಿಂ ಮಹಿಳೆ ಅಜ್ಜಿಯನ್ನು ಮನೆಗೆ ಆಹ್ವಾನಿಸಿದ್ದಳು. ಅಂದಿನಿಂದ ಅಜ್ಜಿ ಮತ್ತು ಈ ಮಹಿಳೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಕಾಣೆಯಾಗಿದ್ದ ಪಾರ್ವತಮ್ಮಳನ್ನು ಹುಡುಕಿದರು.
ಆದರೆ ಸಿಗದೇ ಇದ್ದಾಗ ಮುಸ್ಲಿಂ ಮಹಿಳೆ ಕೂಡ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಅನುಮಾನದ ಮೇಲೆ ಮುಸ್ಲಿಂ ಮಹಿಳೆಯ ಮನೆ ಬೀಗ ತೆಗೆಸಿದ್ದರು. ಈ ವೇಳೆ ಮಹಿಳೆಯ ಮನೆಯ ಬೀರುವಿನಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ವೃದ್ಧೆಯನ್ನು ಕೊಂದು ಶವ ಪ್ಯಾಕ್ ಮಾಡಿ ಬೀರುವಿನಲ್ಲಿಡಲಾಗಿದೆ. ಮುಸ್ಲಿಂ ಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಪಾರ್ವತಮ್ಮ ಕುಟುಂಬದವರು ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ