ಭಾರತದ ಸ್ಮಾರ್ಟ್‌ಫೋನ್ ರಫ್ತು: ಶೀಘ್ರದಲ್ಲೇ ಸ್ಯಾಮ್‌ಸಂಗ್ ಹಿಂದಿಕ್ಕಲಿರುವ ಆಪಲ್

ನವದೆಹಲಿ: ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ವರ್ಷ ಸ್ಮಾರ್ಟ್‌ಫೋನ್‌ಗಳ ರಫ್ತು ಪ್ರಮಾಣವು 127ರಷ್ಟು ಹೆಚ್ಚಾಗಿದೆ. ಭಾರತದ ಸ್ಮಾರ್ಟ್‌ಫೋನ್ ರಫ್ತುಗಳಲ್ಲಿ ಆಪಲ್ ಶೀಘ್ರದಲ್ಲೇ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಭಾರತದಿಂದ ಅತಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡುತ್ತಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಅನ್ನು ಆಪಲ್ ಹಿಂದಿಕ್ಕುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆಪಲ್‌ನ ಸ್ಮಾರ್ಟ್‌ಫೋನ್ ರಫ್ತು ಹೆಚ್ಚಾಗುವ ನಿರೀಕ್ಷೆಯಿದೆ. ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಆಪಲ್ 2.2 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದ್ದರೆ, ಸ್ಯಾಮ್‌ಸಂಗ್ 2.8 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ ಎಂದು ‘ಫೈನಾನ್ಶಿಯಲ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ವರ್ಷ ಸ್ಮಾರ್ಟ್‌ಫೋನ್‌ಗಳ ರಫ್ತು ಪ್ರಮಾಣವು 127 ಪ್ರತಿಶತದಷ್ಟು ಹೆಚ್ಚಾಗಿದೆ. ಎರಡೂ ಕಂಪನಿಗಳು ಪ್ರೊಡಕ್ಷನ್ ಇಂಟಿಗ್ರೇಟೆಡ್ ಅಲೋವೆನ್ಸ್ (ಪಿಎಲ್‌ಐ) ಯೋಜನೆಯಡಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿವೆ.
ಫಾಕ್ಸ್‌ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಕಂಪನಿಗಳು ಭಾರತದಲ್ಲಿ ಆಪಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿವೆ. ವರದಿಯ ಪ್ರಕಾರ, ಆಪಲ್‌ನ ಸ್ಮಾರ್ಟ್‌ಫೋನ್ ರಫ್ತುಗಳ ಪಾಲು ಆರ್ಥಿಕ ವರ್ಷದಲ್ಲಿ 2021ರಲ್ಲಿ 10% ಮತ್ತು ಆರ್ಥಿಕ ವರ್ಷ 2022ರಲ್ಲಿ 50% ತಲುಪಿತು. ಆರ್ಥಿಕ ವರ್ಷ 2021ರಲ್ಲಿ ಏಪ್ರಿಲ್-ಅಕ್ಟೋಬರ್‌ನಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ರಫ್ತು $7.87 ಶತಕೋಟಿಯಿಂದ ಆರ್ಥಿಕ ವರ್ಷ 2022ರಲ್ಲಿ $12.14 ಶತಕೋಟಿಗೆ ಏರಿದೆ. ಒಟ್ಟು ರಫ್ತಿನ ಶೇಕಡಾ 30 ರಷ್ಟನ್ನು ಮೊಬೈಲ್ ಫೋನ್‌ಗಳು ಹೊಂದಿವೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement