ರಾಜ್ಯ ಸರ್ಕಾರದಿಂದ 29 ಕ್ರೀಡಾಪಟುಗಳು, 3 ಸಂಸ್ಥೆಗಳಿಗೆ ಕ್ರೀಡಾ ಪ್ರಶಸ್ತಿ ಪ್ರಕಟ: ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

ಬೆಂಗಳೂರು: 2021ನೇ ಸಾಲಿನ ಏಕಲವ್ಯ , ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ನಾಳೆ  ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ರಾಜ್ಯ ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಏಕಲವ್ಯ ಪ್ರಶಸ್ತಿಗೆ 15, ಕ್ರೀಡಾ ರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆ ಪ್ರಶಸ್ತಿಗೆ 6 ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ 3 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಆಯ್ಕೆಯಾದ ಸಾಧಕರ ಪಟ್ಟಿ ಇಂತಿದೆ.

ಕ್ರೀಡಾ ರತ್ನ ಪ್ರಶಸ್ತಿ:
ಕವನ ಎಂ.ಎಂ- ಬಾಲ್ ಬ್ಯಾಡ್ಮಿಂಟನ್
ಬಿ.ಗಜೇಂದ್ರ- ಗುಂಡು ಎತ್ತುವುದು
ಶ್ರೀಧರ- ಕಂಬಳ
ರಮೇಶ ಮಳವಾಡ- ಖೋಖೋ
ವೀರಭದ್ರ ಮುಧೋಳ- ಮಲ್ಲಕಂಬ
ಖುಷಿ ಹೆಚ್. – ಯೋಗ
ದರ್ಶನ್- ಕಬಡ್ಡಿ
ಲೀನಾ ಅಂತೋನಿ ಸಿದ್ದಿ- ಕುಸ್ತಿ

ಪ್ರಮುಖ ಸುದ್ದಿ :-   ಎಸ್‌ಐಆರ್‌-2026 ಅಂತಿಮ ಪಟ್ಟಿ ಪ್ರಕಟ ; ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು

ಏಕಲವ್ಯ ಪ್ರಶಸ್ತಿ:
ಚೇತನ ಬಿ- ಅಥ್ಲೆಟಿಕ್ಸ್
ಶಿಖಾ ಗೌತಮ- ಬ್ಯಾಡ್ಮಿಂಟನ್
ಕೀರ್ತಿ ರಂಗಸ್ವಾಮಿ- ಸೈಕ್ಲಿಂಗ್
ಅದಿತ್ರಿ ವಿಕ್ರಾಂತ ಪಾಟೀಲ- ಫೆನ್ಸಿಂಗ್
ಅಮೃತ ಮುದ್ರಾಬೆಟ್- ಜಿಮ್ನಾಸ್ಟಿಕ್
ಶೇಷೇಗೌಡ- ಹಾಕಿ
ರೇಷ್ಮಾ ಮರೂರಿ- ಲಾನ್ ಟೆನ್ನಿಸ್
ಟಿ.ಜೆ. ಶ್ರೀಜಯ- ಶೂಟಿಂಗ್
ತನೀಶ್ ಜಾರ್ಜ್ ಮ್ಯಾಥ್ಯೂ- ಈಜು
ಯಶಸ್ವಿನಿ ಘೋರ್ಪಡೆ- ಟೇಬಲ್ ಟೆನ್ನಿಸ್
ಹರಿಪ್ರಸಾದ- ವಾಲಿಬಾಲ್
ಸೂರಜ್ ಸಂಜು ಅಣ್ಣಿಕೇರಿ- ಕುಸ್ತಿ
ಹೆಚ್.ಎಸ್. ಸಾಕ್ಷತ- ನೆಟ್ ಬಾಲ್
ಮನೋಜ ಬಿ.ಎಂ- ಬಾಸ್ಕೆಟ್ ಬಾಲ್
ರಾಘವೇಂದ್ರ ಎಂ- ಪ್ಯಾರಾ ಅಥ್ಲೆಟಿಕ್

ಜೀವಮಾನ ಸಾಧನೆ ಪ್ರಶಸ್ತಿ:
ಅಲ್ಕಾ ಎನ್. ಪಡುತಾರೆ- ಸೈಕ್ಲಿಂಗ್
ಬಿ.ಆನಂದಕುಮಾರ- ಪ್ಯಾರಾ ಬ್ಯಾಡ್ಮಿಂಟನ್
ಶೇಖರಪ್ಪ- ಯೋಗ
ಅಶೋಕ್ ಕೆ.ಸಿ- ವಾಲಿಬಾಲ್
ರವೀಂದ್ರ ಶೆಟ್ಟಿ- ಕಬಡ್ಡಿ
ಬಿ.ಜೆ. ಅಮರನಾಥ- ಯೋಗ

ಕ್ರೀಡಾ ಪೋಷಕ ಪ್ರಶಸ್ತಿ
ಬಿ.ಎಂ.ಎಸ್ ಮಹಿಳಾ ಕಾಲೇಜು- ಬೆಂಗಳೂರು ನಗರ
ಮಂಗಳ ಫ್ರೆಂಡ್ಸ್‌ ಸರ್ಕಲ್- ಮಂಗಳೂರು
ನಿಟ್ಟೆ ಎಜ್ಯುಕೇಷನ್ ಟ್ರಸ್ಟ್- ಉಡುಪಿ ಜಿಲ್ಲೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement