ದೆಹಲಿ ಪಾಲಿಕೆ ಚುನಾವಣೆ: ಟ್ರೆಂಡ್‌ನಲ್ಲಿ ಕಂಡುಬಾರದ ಕ್ಲೀನ್‌ ಸ್ವೀಪ್‌ : ಬಿಜೆಪಿ-ಆಪ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌

ನವದೆಹಲಿ: ದೆಹಲಿ ಪಾಲಿಕೆ ಚುನಾವಣೆಯ ಮತ ಎಣಿಕೆಯಲ್ಲಿ (Delhi Municipal Election Results) ಬಿಜೆಪಿ ಮತ್ತು ಆಪ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌ ನಡೆಯುತ್ತಿದೆ.
ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿರುವ ಭವಿಷ್ಯದಂತೆ ಎಎಪಿ ಕ್ಲೀನ್‌ ಸ್ವೀಪ್‌ನಿಂದ ಬಹಳ ದೂರವಿದ್ದಂತೆ ಕಂಡುಬರುತ್ತಿದೆ. ಬೆಳಿಗ್ಗೆ 10:10 ಕ್ಕೆ, ಎಲ್ಲಾ 250 ಸ್ಥಾನಗಳಲ್ಲಿ ಎಎಪಿ-122 ಮತ್ತು ಮತ್ತು ಬಿಜೆಪಿ 111; ಮತ್ತು ಕಾಂಗ್ರೆಸ್‌ 11ರಲ್ಲಿ ಮುನ್ನಡೆ ಸಾಧಸಿತ್ತು.
ಸುಮಾರು ಎರಡು ಗಂಟೆಗಳ ಎಣಿಕೆಯ ನಂತರ, ಬೆಳಿಗ್ಗೆ 10 ಗಂಟೆಯ ನಂತರ, ಟ್ರೆಂಡ್‌ಗಳಲ್ಲಿ ಎಎಪಿ ಮುಂದಿದದೆ. ಆದರೂ ಬಿಜೆಪಿ ಕೂಡ ಅದರ ಹಿಂದೆಯೇ ಇದೆ. ಅಂತರ ಬಹಳ ಕಡಿಮೆಯಿದೆ. ಟ್ರೆಂಡ್‌ಗಳು ಬದಲಾಗಬಹುದಾಗಿದೆ.

ಬೆಳಿಗ್ಗೆ 8:30ರ ಮೊದಲ ಟ್ರೆಂಡ್‌ಗಳು 100 ವಾರ್ಡ್‌ಗಳಲ್ಲಿ 60ರಲ್ಲಿ AAP ಮುನ್ನಡೆ ಸಾಧಿಸಿತ್ತು. ಆದರೆ ಆದರೆ ಎಲ್ಲಾ 250 ರ ಅಂಕಿಅಂಶಗಳು ಸಿಕ್ಕಿದಂತೆ, ಫಲಿತಾಂಶವು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಂತೆಇರುವಂತೆ ಕಾಣುತ್ತಿಲ್ಲ ಎಂಬುದು ಕಂಡುಬಂದಿದೆ. ಎಕ್ಸಿಟ್‌ ಪೋಲ್‌ ಸಮೀಕ್ಷೆಗಳು 155 ವಾರ್ಡ್‌ಗಳಲ್ಲಿ AAP ಗೆಲುವನ್ನು ಊಹಿಸಿದ್ದವು; ಬಿಜೆಪಿಗೆ 84 ಮತ್ತು ಕಾಂಗ್ರೆಸ್‌ಗೆ 7 ಸ್ಥಾನಗಳನ್ನಿ ನೀಡಿದ್ದವು.
ಕಳೆದ 24 ವರ್ಷಗಳಲ್ಲಿ ಬಿಜೆಪಿ ದೆಹಲಿ ರಾಜ್ಯ ಸರ್ಕಾರವನ್ನು ರಚಿಸದಿದ್ದರೂ, MCD ಮೇಲೆ ಅದರ ನಿಯಂತ್ರಣವು ಪ್ರಬಲವಾಗಿದೆ. 2015 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ರಲ್ಲಿ ದಾಖಲೆಯ 67 ಸ್ಥಾನಗಳನ್ನು ಗೆದ್ದಾಗಲೂ, ಬಿಜೆಪಿ ಎಂಸಿಡಿಯನ್ನು ಉಳಿಸಿಕೊಂಡಿದೆ.
ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ದೆಹಲಿಯ ಆಡಳಿತದ ಕೆಲವು ಭಾಗಗಳನ್ನು ನಿಯಂತ್ರಿಸುತ್ತಿರುವ ಎಎಪಿ ಮತ್ತು ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಹೋರಾಡುತ್ತಿವೆ. ತಾಂತ್ರಿಕ ಕಾರಣಗಳಿಂದಾಗಿ ತನ್ನ ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ ಕಾಂಗ್ರೆಸ್ 247 ಸ್ಥಾನಗಳಲ್ಲಿ ಹೋರಾಟ ನಡೆಸುತ್ತಿದೆ.
ಸುಮಾರು 10 ವರ್ಷಗಳ ಹಿಂದೆ ಪ್ರದೇಶವಾರು ಮೂರು ಭಾಗಗಳಾಗಿ ವಿಂಗಡಿಸಲಾದ MCD ನಂತರದ ಮೊದಲ ನಾಗರಿಕ ಚುನಾವಣೆಗಳು – ಪುನರ್‌ಒಗ್ಗೂಡಿಸಲಾಯಿತು ಮತ್ತು ವಾರ್ಡ್‌ಗಳನ್ನು ಮರುವಿನ್ಯಾಸಗೊಳಿಸಲಾಯಿತು. ಬಿಜೆಪಿಯ ಇತ್ತೀಚಿನ ಅವಧಿ ಈ ವರ್ಷದ ಆರಂಭದಲ್ಲಿ ಕೊನೆಗೊಂಡಿತು. 1,300 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement