ಗುಜರಾತ್ ಚುನಾವಣೆ: ಹಾಲಿ ಶಾಸಕರ ಕೈಬಿಟ್ಟು 45 ಮಂದಿ ಹೊಸಬರಿಗೆ ಟಿಕೆಟ್‌ ನೀಡಿದ್ದ ಬಿಜೆಪಿ, 43 ಅಭ್ಯರ್ಥಿಗಳ ಗೆಲುವು

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಹಾಲಿ ಶಾಸಕರನ್ನು ಕೈಬಿಟ್ಟು, ಕಣಕ್ಕಿಳಿಸಿದ್ದ 45 ಹೊಸ ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಆಡಳಿತ ವಿರೋಧಿ ಭಾವನೆ ತಟಸ್ಥಗೊಳಿಸುವ ಪ್ರಯತ್ನದಲ್ಲಿ, ಆಡಳಿತ ಪಕ್ಷವು ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 45 ಶಾಸಕರಿಗೆ ಟಿಕೆಟ್‌ ನೀಡಿರಲಿಲ್ಲ. ಗುಜರಾತಿನಲ್ಲಿ ಬಿಜೆಪಿ ಪಕ್ಷ 27 ವರ್ಷಗಳಿಂದ ಅಧಿಕಾರದಲ್ಲಿದೆ. ಅದರ ಹೆಚ್ಚಿನ ಹೊಸ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದರಿಂದ ಬಿಜೆಪಿ ತಂತ್ರವು ಫಲ ನೀಡಿತು.
ಅಪವಾದಗಳೆಂದರೆ ಬೊಟಾಡ್ ಮತ್ತು ವಘೋಡಿಯಾ ಕ್ಷೇತ್ರ, ಅಲ್ಲಿ ಬಿಜೆಪಿ ನೂತನ ಅಭ್ಯರ್ಥಿಗಳು ಕ್ರಮವಾ ಆಮ್ ಆದ್ಮಿ ಪಕ್ಷ ಮತ್ತು ಸ್ವತಂತ್ರ ಪ್ರತಿಸ್ಪರ್ಧಿಗಳಿಂದ ಸೋಲಿಸಲ್ಪಟ್ಟರು.
ಬೊಟಾಡ್‌ನಲ್ಲಿ ಬಿಜೆಪಿ ಹಾಲಿ ಶಾಸಕ ಹಾಗೂ ಮಾಜಿ ಇಂಧನ ಸಚಿವ ಸೌರಭ್ ಪಟೇಲ್ ಅವರನ್ನು ಕೈಬಿಟ್ಟು ಘನಶ್ಯಾಮ್ ವಿರಾನಿ ಅವರನ್ನು ಕಣಕ್ಕಿಳಿಸಿತ್ತು. ಪಟೇಲ್ 1998, 2002, 2007 ಮತ್ತು 2017 ರಲ್ಲಿ ಸ್ಥಾನವನ್ನು ಗೆದ್ದಿದ್ದರು. 2012 ರಲ್ಲಿ, ಬಿಜೆಪಿಯ ಟಿ ಡಿ ಮಣಿಯಾ ಅವರು ಸ್ಥಾನವನ್ನು ಗೆದ್ದಿದ್ದರು. ಈ ಬಾರಿ ವಿರಾನಿ ಅವರು ಎಎಪಿಯ ಉಮೇಶ್ ಮಕ್ವಾನಾ ಅವರಿಂದ 2,779 ಮತಗಳ ಅಂತರದಿಂದ ಸೋಲಿಸಲ್ಪಟ್ಟರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ವಡೋದರಾ ಜಿಲ್ಲೆಯ ವಘೋಡಿಯಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಧು ಶ್ರೀವಾಸ್ತವ ಅವರ ಬದಲಿಗೆ ಅಶ್ವಿನ್ ಪಟೇಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆರು ಬಾರಿ ಶಾಸಕರಾಗಿದ್ದ ಶ್ರೀವಾಸ್ತವ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದರು. ಬಿಜೆಪಿ ಟಿಕೆಟ್‌ಗಾಗಿ ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಧರ್ಮೇಂದ್ರಸಿನ್ಹ ವಘೇಲಾ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಪಟೇಲ್ ಅವರನ್ನು ಸುಮಾರು 14,000 ಮತಗಳಿಂದ ಸೋಲಿಸಿದರು. ಶ್ರೀವಾಸ್ತವ 14,645 ಮತಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 18,870 ಮತಗಳನ್ನು ಪಡೆದರು.
ಆದರೆ ಉಳಿದೆಲ್ಲ ಕಡೆ ಬಿಜೆಪಿ ಹೊಸಬರು ಗೆಲ್ಲುವಲ್ಲಿ ಯಶಸ್ವಿಯಾದರು. 2022 ರಲ್ಲಿ ಪಕ್ಷದಿಂದ ಕೈಬಿಡಲ್ಪಟ್ಟ ಪ್ರಮುಖ ಶಾಸಕರಲ್ಲಿ ಮಾಜಿ ಮುಖ್ಯಮಂತ್ರಿ ರೂಪಾನಿ, ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಮಾಜಿ ಗೃಹ ಸಚಿವ ಪ್ರದೀಪ ಸಿಂಗ್‌ ಜಡೇಜಾ, ಮಾಜಿ ಕಂದಾಯ ಸಚಿವ ಕೌಶಿಕಭಾಯ್ ಪಟೇಲ್, ಕಳೆದ ವಿಧಾನಸಭೆಯ ಅಸೆಂಬ್ಲಿಯ ಸ್ಪೀಕರ್ ಆಗಿದ್ದ ನಿಮಾಬೆನ್ ಆಚಾರ್ಯ ಮತ್ತು ಗುಜರಾತ್ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಫಾಲ್ದು ಸೇರಿದ್ದಾರೆ. ಚುನಾವಣೆಗೆ ಮುನ್ನ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement