ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮತ್ತೊಬ್ಬ ನಟಿ ನೋರಾ ಫತೇಹಿ

ನವದೆಹಲಿ: ಬಾಲಿವುಡ್ ನಟಿ ನೋರಾ ಫತೇಹಿ ಅವರು ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ದುರುದ್ದೇಶಪೂರಿತ ಕಾರಣಗಳಿಗಾಗಿ ತಮ್ಮ ವಿರುದ್ಧ ಮಾನನಷ್ಟವಾಗುವ ಆರೋಪ ಮಾಡಿದ್ದಾರೆ ಎಂದು ಫತೇಹಿ ಆರೋಪಿಸಿದ್ದಾರೆ.
ಫೆರ್ನಾಂಡೀಸ್ ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ನನ್ನ ವೃತ್ತಿಜೀವನವನ್ನು ನಾಶಮಾಡುವ ಸಲುವಾಗಿ ನನಗೆ ಮಾನಹಾನಿ ಮಾಡಲು ಪ್ರಯತ್ನಿಸಿದ್ದಾರೆ, ಏಕೆಂದರೆ ನಾವಿಬ್ಬರೂ ಒಂದೇ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಇತರ ಕಾರಣಗಳಿಂದಲೂ ಒಂದೇ ರೀತಿಯ ಹಿನ್ನೆಲೆಯನ್ನು ಹೊಂದಿದ್ದೇವೆ ಎಂದು ಫತೇಹಿ ಆರೋಪಿಸಿದ್ದಾರೆ.
ಡಿಸೆಂಬರ್ 2 ರಂದು, ಸುಕೇಶ ಚಂದ್ರಶೇಖರನ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ವು ಬಾಲಿವುಡ್‌ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿತ್ತು.
ನೋರಾ ಫತೇಹಿ ಅವರು ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಜಾಕ್ವೆಲಿನ್ ಅವರ ಲಿಖಿತ ಮನವಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ದೂರುದಾರರು (ನೋರಾ ಫತೇಹಿ) ಮತ್ತು ಆರೋಪಿ (ಜಾಕ್ವೆಲಿನ್ ಫರ್ನಾಂಡೀಸ್) ಇಬ್ಬರೂ ವಿದೇಶಿ ಮೂಲದ ನಟಿಯರಾಗಿದ್ದಾರೆ ಮತ್ತು ಭಾರತೀಯ ಚಲನಚಿತ್ರೋದ್ಯಮದಲ್ಲಿ ಖ್ಯಾತಿಯನ್ನು ಗಳಿಸುವಲ್ಲಿ ಇಬ್ಬರೂ ಕಷ್ಟಪಟ್ಟಿದ್ದಾರೆ ಎಂದು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

ಈ ಹಿಂದೆ, ಫರ್ನಾಂಡೀಸ್ ಅವರಿಗೆ ಸೇರಿದ 7.2 ಕೋಟಿ ಮೌಲ್ಯದ ಸ್ಥಿರ ಠೇವಣಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಲಗತ್ತಿಸಿತ್ತು, ಇದು ನಟಿಯು ಸುಕೇಶನಿಂದ ಪಡೆದ ಈ ಉಡುಗೊರೆಗಳು ಮತ್ತು ಆಸ್ತಿಗಳು ಅಪರಾಧದ ಆದಾಯ ಎಂದು ಇ.ಡಿ.ಹೇಳಿದೆ. ಫೆಬ್ರವರಿಯಲ್ಲಿ, ಸುಕೇಶ ಚಂದ್ರಶೇಖರ ಅವರನ್ನು ಬಾಲಿವುಡ್ ನಟಿಯರಿಗೆ ಪರಿಚಯಿಸಿದ ಪಿಂಕಿ ಇರಾನಿ ವಿರುದ್ಧ ಇ.ಡಿ. ತನ್ನ ಮೊದಲ ಪೂರಕ ಪ್ರಾಸಿಕ್ಯೂಷನ್ ದೂರನ್ನು ದಾಖಲಿಸಿತು.
ಇರಾನಿ ಅವರು ಫರ್ನಾಂಡೀಸ್‌ಗೆ ದುಬಾರಿ ಉಡುಗೊರೆಗಳನ್ನು ಆರಿಸುತ್ತಿದ್ದರು ಮತ್ತು ನಂತರ ಸುಕೇಶ ಚಂದ್ರಶೇಖರ ಅದನ್ನು ಪಾವತಿಸಿದ ನಂತರ ಅದನ್ನು ಅವರ ಮನೆಗೆ ಕಳುಹಸಿತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಇ.ಡಿ. ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮುಂದೆ ಈ ಪ್ರಕರಣದ ಮೊದಲ ಚಾರ್ಜ್ ಶೀಟ್ ಸಲ್ಲಿಸಿತು.
ಸುಕೇಶ ಚಂದ್ರಶೇಖರ ವಿವಿಧ ಮಾಡೆಲ್‌ಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಸುಮಾರು 20 ಕೋಟಿ ರೂ. ಗಳನ್ನು ಖರಚು ಮಾಡಿದ್ದಾನೆ. ಆದಾಗ್ಯೂ, ಕೆಲವರು ಅವನಿಂದ ಉಡುಗೊರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement