ಅಂಚೆ ಇಲಾಖೆಯಿಂದ 60,544 ಹುದ್ದೆಗಳಿಗೆ ಅರ್ಜಿ ಆಹ್ವಾನ : 10ನೇ ತರಗತಿ, ದ್ವಿತೀಯ ಪಿಯು ಪಾಸಾದವರು ಅರ್ಜಿ ಹಾಕಬಹುದು, ಡಿ.14 ಕೊನೆಯ ದಿನ

ಭಾರತೀಯ ಅಂಚೆ ಇಲಾಖೆಯು ಒಟ್ಟು 60,544 ಮೇಲ್​ ಗಾರ್ಡ್ (Mail Guard)​, ಪೋಸ್ಟ್​ ಮ್ಯಾನ್ (Post Man) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಆನ್​ಲೈನ್(Online) ಅಥವಾ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆ-ಭಾರತೀಯ ಅಂಚೆ ಇಲಾಖೆ
ಹುದ್ದೆಗಳು-ಮೇಲ್​ ಗಾರ್ಡ್​ ಹಾಗೂ ಪೋಸ್ಟ್​ ಮ್ಯಾನ್
ಒಟ್ಟು ಹುದ್ದೆ-60,544
ಮಾಸಿಕ ಸಂಬಳ- ₹ 21,700-69,100
ಅರ್ಜಿ ಸಲ್ಲಿಸಲು ಕೊನೆ ದಿನ- 14-12-2022
ಅಧಿಕೃತ ವೆಬ್​ಸೈಟ್- http://indiapost.gov.in
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ:ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು.
ಉದ್ಯೋಗದ ಸ್ಥಳ: ಮೇಲ್​ ಗಾರ್ಡ್​, ಪೋಸ್ಟ್​ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಭಾರತದಲ್ಲಿ ಯಾವುದೇ ಪ್ರದೇಶದಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

4.3 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement