ಯಲ್ಲಾಪುರ: 40ಕ್ಕೂ ಹೆಚ್ಚು ಟರ್ಕಿ ಕೋಳಿಗಳ ಸಾವು, ವಿಷಪ್ರಾಶನದ ಶಂಕೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಹಿಳೆಯೊಬ್ಬಳ 40ಕ್ಕೂ ಹೆಚ್ಚು ಕೋಳಿಗಳು ಸಾವಿಗೀಡಾದ ವರದಿಯಾಗಿದ್ದು, ವಿಷ ಪ್ರಾಷನದ ಶಂಕೆ ವ್ಯಕ್ತವಾಗಿದೆ.
ಕಿಡಿಗೇಡಿಗಳು ವಿಷ ಪ್ರಾಶನ ಮಾಡಿದ್ದರಿಂದ ಉಮ್ಮಚಗಿಯ ಕಲಾವತಿ ಸೋಮಿನ್ ಸಿದ್ದಿ ಎಂಬ ಮಹಿಳೆಗೆ ಸೇರಿದ ಸುಮಾರು 40ಕ್ಕೂ ಹೆಚ್ಚು ಟರ್ಕಿ ಕೋಳಿಗಳು ಎರಡು ಹಂತಗಳಲ್ಲಿ ಸಾವಿಗೀಡಾಗಿದೆ.
ತಿಂಗಳಿಗೆ ಮೊದಲು 35ಕ್ಕೂ ಹೆಚ್ಚು ಕೋಳಿಗಳು ಮೊದಲ ಸಲ ಇದ್ದಕ್ಕಿದ್ದಂತೆ ಸಾವಿಗೀಡಾದಾಗ ವಿಷಯ ಗೊತ್ತಿರದ ಮನೆಮಂದಿ ಅವುಗಳಲ್ಲಿ ಕೆಲವು ಕೋಳಿಗಳ ಅಡುಗೆ ಮಾಡಿ ಊಟ ಮಾಡಿದ್ದರಂತೆ.. ಆದರೆ ಮಾರನೆಯ ದಿನ ಅವರಿಗೆ ವಾಂತಿ ಭೇದಿಯಂತ ಸಮಸ್ಯೆ ಶುರುವಾಗಿದೆ. ಅವರು ವೈದ್ಯರ ಬಳಿ ಬಂದಾಗ ಸಣ್ಣ ಪ್ರಮಾಣದ ವಿಷ ದೇಹ ಸೇರಿರುವುದು ತಿಳಿದಿದೆ. ನಂತರ ನಾಲ್ಕಾರು ದಿನ ಔಷಧೋಪಚಾರ ಮಾಡಿದ ನಂತರ ಗುಣಮುಖರಾಗಿರುವುದಾಗಿ ಕಲಾವತಿ ಸಿದ್ದಿ ಹೇಳಿಕೊಂಡಿದ್ದಾರೆ.

ಈಗ ಐದಾರು ದಿನಗಳ ಹಿಂದೆ ಮತ್ತಷ್ಟು ಕೋಳಿಗಳು ಸಾವಿಗೀಡಾದಾಗ ಮನೆಮಂದಿ ಮತ್ತಷ್ಟು ಕಂಗಾಲಾದರು ಸಂಘದಿಂದ ಸಾಲ ಮಾಡಿ ಕೋಳಿ ಸಾಕಿದ್ದ ಬಡ ಕುಟುಂಬ ಈಗ ಇಷ್ಟೊಂದು ಸಾಕು ಕೋಳಿಗಳು ಒಮ್ಮೆಗೇ ಸಾವಿಗೀಡಾಗಿದ್ದರಿಂದ ಕಣ್ಣೀರು ಹಾಕುತ್ತಿವೆ. ಕಿಡಿಗೇಡಿಗಳು ವಿಷಪ್ರಾಶನ ಮಾಡಿದ ಪರಿಣಾಮ ಈ ರೀತಿಯಲ್ಲಿ ಕೋಳಿಗಳು ಸಾವಿಗೀಡಾಗಿವೆ ಎಂದು ಈ ಮಹಿಳೆ ಹೇಳಿಕೊಂಡಿದ್ದಾಳೆ.
ಕೋಳಿಗಳು ಮನೆ ಬಾಗಿಲಿಗೆ ಬಂದು ತೊಂದರೆ ಕೊಡುತ್ತವೆಯೆಂದು ಅಮಾನವೀಯ ಕೆಲಸ ಮಾಡಬಾರದು. ಕೃತ್ಯ ಎಸಗಿದವರು ಯಾರೇ ಆಗಿದ್ದರೂ ದೇವರು ಒಳ್ಳೆಯದನ್ನು ಮಾಡುವುದಿಲ್ಲ. ನೊಂದ ಕುಟುಂಬಕ್ಕೆ ಪಂಚಾಯತದಿಂದ ಕೈಲಾದ ಸಹಾಯ ಮಾಡಲಾಗುವುದು ಎಂದು ಈ ಕುರಿತು ಉಮ್ಮಚಗಿ ಗ್ರಾಮ ಪಂಚಾಯತ ಸದಸ್ಯ ಗ.ರಾ. ಭಟ್‌ ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement