ಕರ್ನಾಟಕ ವಿಧಾನಸಭಾ ಚುನಾವಣೆ : 36 ಸದಸ್ಯರ ಕಾಂಗ್ರೆಸ್‌ ಚುನಾವಣಾ ಸಮಿತಿ ರಚನೆ-ಸದಸ್ಯರ ಪಟ್ಟಿ ಇಲ್ಲಿದೆ…

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿದೆ. ದೆಹಲಿಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಹಂಚಿಕೆ ಮಾಡಲು 36 ಮಂದಿ ಸದಸ್ಯರ ಕೆಪಿಸಿಸಿ ಚುನಾವಣಾ ಸಮಿತಿ ರಚಿಸಿದೆ.
ಬುಧವಾರ ರಾತ್ರಿ (ಡಿಸೆಂಬರ್ 14) ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ಪ್ರಕಟಿಸಿದ್ದು, ಟಿಕೆಟ್​​ಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಈ ಸಮಿತಿ ಪರಿಶೀಲನೆ ಮಾಡಿ ಪ್ರತಿ ಕ್ಷೇತ್ರದಲ್ಲಿ 1 ರಿಂದ 3 ಹೆಸರು ಶಿಫಾರಸು ಮಾಡಲಿದೆ. ಟಿಕೆಟ್ ಬಯಸಿ ಒಟ್ಟು 1,450 ಅರ್ಜಿಗಳು ಸಲ್ಲಿಕೆಯಾಗಿದೆ.
ಸಮಿತಿಯಲ್ಲಿರುವ ನಾಯಕರ ಹೆಸರುಗಳು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ​, ಎಂ.ಬಿ.ಪಾಟೀಲ, ದಿನೇಶ್ ಗುಂಡೂರಾವ್​, ಹೆಚ್.ಕೆ.ಪಾಟೀಲ, ಕೆ.ಹೆಚ್.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ​, ಆರ್.ವಿ.ದೇಶಪಾಂಡೆ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸತೀಶ ಜಾರಕಿಹೊಳಿ, ಆರ್.ಧ್ರುವನಾರಾಯಣ, ಸಲಿಂ ಅಹ್ಮದ್, ರೆಹಮಾನ್ ಖಾನ್, ಮಾರ್ಗರೇಟ್ ಆಳ್ವಾ, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಕೆ.ಗೋವಿಂದರಾಜ, ಡಾ.ಹೆಚ್.ಸಿ.ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಬಸವರಾಜ ರಾಯರೆಡ್ಡಿ, ಬಿ.ಕೆ.ಸುರೇಶ, ಎಲ್.ಹನುಮಂತಯ್ಯ, ನಾಸಿರ್ ಹುಸೇನ್, ಎಂ.ಆರ್.ಸೀತಾರಾಮ, ಶಿವರಾಜ ತಂಗಡಗಿ, ವಿನಯ ಕುಲಕರ್ಣಿ, ವಿ.ಎಸ್.ಉಗ್ರಪ್ಪ, ಭೋಸರಾಜ, ಶರಣಪ್ಪ ಸುನಗಾರ್ ವಿನಯ್ ಕುಮಾರ್, ಜಿ.ಪದ್ಮಾವತಿ, ಶಾಮನೂರು ಶಿವಶಂಕರಪ್ಪ.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement