ಡಿಜೆ ಸಂಗೀತ, ಬ್ಯಾಂಡ್ ನುಡಿಸಿದರೆ ನಿಕಾಹ್ ಮಾಡಬೇಡಿ: ಧರ್ಮಗುರುಗಳಿಗೆ ಮುಸ್ಲಿಂ ಸಂಘಟನೆ ಸೂಚನೆ

ನವದೆಹಲಿ: ಕಾರ್ಯಕ್ರಮದಲ್ಲಿ ಡಿಜೆ ಮ್ಯೂಸಿಕ್ ಅಥವಾ “ಬ್ರಾಸ್ ಬ್ಯಾಂಡ್” ನುಡಿಸಿದರೆ ‘ನಿಕಾಹ್’ (ಮುಸ್ಲಿಂ ವಿವಾಹ) ಮಾಡಬೇಡಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುಸ್ಲಿಂ ಮಹಾಸಭಾವು ಧರ್ಮಗುರುಗಳನ್ನು ಒತ್ತಾಯಿಸಿದೆ.
ವಿವಾಹ ಸಮಾರಂಭಗಳನ್ನು “ಸರಳವಾಗಿ” ನಡೆಸಲು ಸಮುದಾಯಗಳನ್ನು ಮನವೊಲಿಸಲು ಧರ್ಮಗುರುಗಳ ಸಹಕಾರವನ್ನು ಕೋರಿ ಸಂಸ್ಥೆ ಹೇಳಿಕೆ ನೀಡಿದೆ. ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ಸಂಸ್ಥೆ ವಿರೋಧಿಸುವುದನ್ನು ಮುಂದುವರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭವಿಷ್ಯದಲ್ಲಿ “ಡಿಜೆ ಸಂಸ್ಕೃತಿ”ಯನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಲಿಖಿತ ಭರವಸೆಯನ್ನು ಕುಟುಂಬಗಳಿಂದ ತೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಮುಸ್ಲಿಂ ಧರ್ಮಗುರುಗಳ ಗುಂಪು ನೃತ್ಯ, ಜೋರಾಗಿ ಸಂಗೀತ ನುಡಿಸುವುದು ಮತ್ತು ಮದುವೆಯ ಸಮಯದಲ್ಲಿ ಪಟಾಕಿ ಸಿಡಿಸುವಂತಹ ” ಇಸ್ಲಾಮಿಕ್ ಅಲ್ಲದ ಆಚರಣೆಗಳನ್ನು” ನಿಷೇಧಿಸಿದೆ ಮತ್ತು ಆದೇಶವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿತ್ತು.
ಸಿಬಿಲಿಬಾಡಿ ಜಾಮಾ ಮಸೀದಿಯ ಮುಖ್ಯಸ್ಥ ಇಮಾಮ್ ಮೌಲಾನಾ ಮಸೂದ್ ಅಖ್ತರ್, “ಇಸ್ಲಾಂನಲ್ಲಿ ಇಂತಹ ಆಚರಣೆಗಳಿಗೆ ಅನುಮತಿ ಇಲ್ಲ, ಇದು ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ” ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement