ನೋಂದಾಯಿತ ಕಟ್ಟಡ -ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಹೊಸ ಬಸ್‌ ಪಾಸ್‌ ವಿತರಣೆ

ಹುಬ್ಬಳ್ಳಿ : ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಡಿಸೆಂಬರ್‌ 23ರಿಂದ ಮೂರು ತಿಂಗಳ ಅವಧಿಗಾಗಿ ಉಚಿತ ಹೊಸ ಪಾಸುಗಳನ್ನು ವಿತರಿಸಲು ಪ್ರಾರಂಭಿಸಿದ್ದು, ಈ ಪಾಸುಗಳನ್ನು ಪಡೆದು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್ ಯೋಜನೆಯನ್ನು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸೆಪ್ಟೆಂಬರ್-2022ರಿಂದ ಪ್ರಾರಂಭಿಸಿದೆ. ಈ ಪಾಸುಗಳ ಅವಧಿಯು ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳುತ್ತಿದ್ದು, ಹೀಗಾಗಿ ಕಾರ್ಮಿಕ ಇಲಾಖೆಯಿಂದ 23-12-2022 ರಿಂದ ಮೂರು ತಿಂಗಳ ಅವಧಿಗಾಗಿ ಹೊಸ ಬಸ್ ಪಾಸುಗಳ ವಿತರಣಾ ಪ್ರಕ್ರಿಯೆ ಆರಂಭಿಸಲಾಗಿದೆ.

ಇದಕ್ಕೆ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ, “ನೋಂದಾಯಿತ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯ ನೋಂದಾಯಿತ ಗುರುತಿನ ಚೀಟಿ/ಮಾಹಿತಿಯೊಂದಿಗೆ ಸ್ಥಳೀಯ ಗ್ರಾಮ-1 ಅಥವಾ ಕರ್ನಾಟಕ-1 ಕೇಂದ್ರವನ್ನು ಸಂಪರ್ಕಿಸಿ ಈ ಬಸ್ ಪಾಸ್ ಸೌಲಭ್ಯವನ್ನು ಪಡೆಯಬೇಕು. ಕಾರ್ಮಿಕರು ಸದರಿ ಸೌಲಭ್ಯದ ಸದುಪಯೋಗ ಪಡೆದು ಉಚಿತವಾಗಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಾಲ್ವರು ಅಮಾಯಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ತಂದೆ-ತಾಯಿ ಕೊಲೆಗೆ ಮಗನೇ ಸುಪಾರಿ ಕೊಟ್ಟಿದ್ದ...! 8 ಮಂದಿ ಬಂಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement