ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆ ಎಂಬಂತೆ ಕಾಣುತ್ತಿರಲಿಲ್ಲ : ಕೂಪರ್ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ಪ್ರತಿಪಾದನೆ

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ಎರಡು ವರ್ಷಗಳ ನಂತರ ಇದು ಆತ್ಮಹತ್ಯೆ ಎಂದು ತೋರುತ್ತಿಲ್ಲ’ ಎಂದು ಕೂಪರ್ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ತಿಳಿಸಿದ್ದಾರೆ.
ಸುಶಾಂತ ಸಿಂಗ್‌ ರಜಪೂತ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಶವಾಗಾರದ ಸೇವಕ ರೂಪ್‌ಕುಮಾರ್ ಶಾ ಅವರು ಪ್ರತಿಪಾದಿಸಿದ್ದಾರೆ ಮತ್ತು ರಜಪೂತ್ ಅವರ ದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಹೇಳಿದ್ದಾರೆ.
ನಾನು ಸುಶಾಂತ್ ಸಿಂಗ್ ರಜಪೂತ್ ಅವರ ದೇಹವನ್ನು ನೋಡಿದಾಗ ಅದು ಆತ್ಮಹತ್ಯೆ ಎಂದು ತೋರುತ್ತಿರಲಿಲ್ಲ. ಅವರ ದೇಹದ ಮೇಲೆ ಗಾಯದ ಗುರುತುಗಳಿತ್ತು. ನಾನು ನನ್ನ ಹಿರಿಯರ ಬಳಿಗೆ ಹೋಗಿದ್ದೆ ಆದರೆ ನಾವು ಅದನ್ನು ನಂತರ ಚರ್ಚಿಸುತ್ತೇವೆ ಎಂದು ಅವರು ಹೇಳಿದರು” ಎಂದು ರೂಪ್‌ಕುಮಾರ್ ಶಾ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಜಪೂತ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಶಾ ಆರೋಪಿಸಿದರು. “ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಏನು ಬರೆಯಬೇಕು ಎಂಬುದು ವೈದ್ಯರ ಕೆಲಸ. ಅವರಿಗೆ ನ್ಯಾಯ ಸಿಗಬೇಕು. ಸುಶಾಂತ್ ಸಿಂಗ್ ರಜಪೂತ್ ಅವರ ಚಿತ್ರ ನೋಡಿಯೇ ಎಲ್ಲರೂ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಬಹುದು. ತನಿಖಾ ಸಂಸ್ಥೆ ನನಗೆ ಕರೆ ಮಾಡಿದರೆ, ನಾನು ಅವರಿಗೂ ಹೇಳುತ್ತೇನೆ ಎಂದು ಶಾ ಹೇಳಿದ್ದಾರೆ.
ಮುಂಬೈನ ಅಂಧೇರಿ ಪಶ್ಚಿಮದ ಬಿಜೆಪಿ ಶಾಸಕರು ರಜಪೂತ್ ಅವರ ದೇಹದ ಮೇಲೆ ಗಾಯದ ಗುರುತುಗಳ ಬಗ್ಗೆ ಶಾ ಮಾತನಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 34 ವರ್ಷದ ನಟನ ಹಠಾತ್ ನಿಧನದ ನಂತರ ಕೊಲೆಯಾದ ಬಗ್ಗೆ ಆರೋಪಗಳು ಬಂದವು.ಮರಣೋತ್ತರ ಪರೀಕ್ಷೆಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಿದರೆ, ರಜಪೂತ್ ಅವರ ಕುಟುಂಬವು ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅವರು ‘ಫೌಲ್ ಪ್ಲೇ’ ಬಗ್ಗೆ ಸುಳಿವು ನೀಡಿದ್ದರು. ಆ ಸಮಯದಲ್ಲಿ, ‘ಜಸ್ಟೀಸ್ ಫಾರ್ ಎಸ್‌ಎಸ್‌ಆರ್’ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವೀಟ್‌ಗಳು ತಿಂಗಳುಗಟ್ಟಲೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್‌ ಆಗಿದ್ದವು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ಆರಂಭದಲ್ಲಿ ತನಿಖೆ ನಡೆಸಿದ್ದರು. ನಂತರ ಅದನ್ನು ಜಾರಿ ನಿರ್ದೇಶನಾಲಯ (ಇಡಿ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವರ್ಗಾಯಿಸಲಾಯಿತು.
ನಟಿ ರಿಯಾ ಚಕ್ರವರ್ತಿ ಅವರನ್ನು ಸಹ ಬಂಧಿಸಲಾಯಿತು ಮತ್ತು ಅವರು ಎಸ್‌ಎಸ್‌ಆರ್‌ಗಾಗಿ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಯಿತು.
ಸೆಪ್ಟೆಂಬರ್ 2020ರಿಂದ ಸಿಬಿಐ ಇನ್ನೂ ಈ ವಿಷಯವನ್ನು ತನಿಖೆ ಮಾಡುತ್ತಿದೆ ಮತ್ತು ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಅದು “ಕೊಲೆ” ಸಿದ್ಧಾಂತವನ್ನು ತಳ್ಳಿಹಾಕಿದೆ ಎಂಬ ವರದಿಗಳು ಹೊರಹೊಮ್ಮಿದ ನಂತರ ಅದರ ಪ್ರತಿಕ್ರಿಯೆ ಬಂದಿತು.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement