‘ಖಿನ್ನತೆಗೆ ಒಳಗಾದ’ ಪುತಿನ್ ಟೀಕಾಕಾರ ಒಡಿಶಾದ ಹೊಟೇಲಿನ 3ನೇ ಮಹಡಿಯಿಂದ ಬಿದ್ದು ಸಾವು ; ವಾರದಲ್ಲಿ 2ನೇ ರಷ್ಯಾ ಪ್ರವಾಸಿಗನ ಸಾವು

ನವದೆಹಲಿ: ಒಂದೇ ವಾರದಲ್ಲಿ ಒಡಿಶಾ ಹೋಟೆಲ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ಟೀಕಾಕಾರ ಸೇರಿದಂತೆ ರಷ್ಯಾದ ಪ್ರವಾಸಿಗರಿಬ್ಬರು ಸಾವಿಗೀಡಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಉಕ್ರೇನ್ ಯುದ್ಧದ ಬಗ್ಗೆ ರಷ್ಯಾದ ಅಧ್ಯಕ್ಷ ಪುತಿನ್ ಅವರನ್ನು ಟೀಕಿಸಿದ ರಷ್ಯಾದ ಶಾಸಕ ಪಾವೆಲ್ ಆಂಟೊವ್ ಅವರು ಒಡಿಶಾದ ರಾಯಗಡ ಪ್ರದೇಶದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.
ಮಲ್ಟಿ ಮಿಲಿಯನೇರ್ ಒಡಿಶಾದ ರಾಯಗಡ ಪ್ರದೇಶದ ಹೋಟೆಲ್ ಸಾಯಿ ಇಂಟರ್ನ್ಯಾಷನಲ್‌ನಲ್ಲಿ ವಿಹಾರಕ್ಕೆ ಬಂದಿದ್ದು, ಅಲ್ಲಿ ಅವರು ಮುಂಬರುವ 66ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಪೊಲೀಸರ ಪ್ರಕಾರ, ಅವರು ಮೂರನೇ ಮಹಡಿಯ ಹೋಟೆಲ್ ಕಿಟಕಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಇದೇ ಒಡಿಶಾ ಹೋಟೆಲ್‌ನಲ್ಲಿ ಒಂದು ವಾರದೊಳಗೆ ಇದು ರಷ್ಯಾದ ಶಾಸಕರ ಎರಡನೇ ಸಾವು ಇದಾಗಿದೆ. ಆಂಟೋವ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ ಅವರು ಮಾತನಾಡಿ, ಅವರ ಕುಟುಂಬದ ಅನುಮತಿಯೊಂದಿಗೆ ಅಧಿಕಾರಿಗಳು ಸೋಮವಾರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪಾವೆಲ್ ಡಿಸೆಂಬರ್ 25 ರಂದು ಶವವಾಗಿ ಪತ್ತೆಯಾಗಿದ್ದಾರೆ. ಅವರು (ಪಾವೆಲ್ ಆಂಟೊನೊವ್) ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಟೆರೇಸ್‌ನಿಂದ ಬಿದ್ದಿದ್ದಾರೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ಸುದ್ದಿಯನ್ನು ದೃಢೀಕರಿಸಿ, ಟೆಲಿಗ್ರಾಮ್ ಚಾನೆಲ್‌ನಲ್ಲಿ ರಷ್ಯಾದ ಪ್ರಾದೇಶಿಕ ಸಂಸತ್ತಿನ ಉಪಾಧ್ಯಕ್ಷ ವ್ಯಾಚೆಸ್ಲಾವ್ ಕಾರ್ತುಖಿನ್, “ನಮ್ಮ ಸಹೋದ್ಯೋಗಿ, ಯಶಸ್ವಿ ಉದ್ಯಮಿ ಮತ್ತು ಲೋಕೋಪಕಾರಿ ಪಾವೆಲ್ ಆಂಟೊವ್ ನಿಧನರಾದರು. ಸಂಯುಕ್ತ ರಷ್ಯಾ ಬಣದ ಪ್ರತಿನಿಧಿಗಳ ಪರವಾಗಿ ನಾನು ನನ್ನ ತೀವ್ರವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆಎಂದು ಹೇಳಿದ್ದಾರೆ.
ಅವರ ಪಕ್ಷದ ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ (61) ಅವರ ನಿಗೂಢ ಸಾವಿನ ಎರಡು ದಿನಗಳ ನಂತರ ಈ ಸಾವು ಸಂಭವಿಸಿದೆ, ಅವರು ಒಡಿಶಾದ ರಾಯಗಡದಲ್ಲಿರುವ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಜೂನ್‌ನಲ್ಲಿ, ರಷ್ಯಾ ಉಕ್ರೇನ್‌ ಮೇಲೆ ನಡೆಸಿದ ಯುದ್ಧ ಮತ್ತು ವಾಯುದಾಳಿಗಳನ್ನು ಆಂಟೊವ್ ತೀವ್ರವಾಗಿ ಟೀಕಿಸಿದ್ದರು.
ಅವರು ರಷ್ಯಾದ ಕ್ಷಿಪಣಿ ದಾಳಿಯನ್ನು ಖಂಡಿಸಿದರು. “ಒಬ್ಬ ಹುಡುಗಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ, ಹುಡುಗಿಯ ತಂದೆ ಸತ್ತಂತೆ ತೋರುತ್ತಿದೆ. ತಾಯಿಯನ್ನು ಕ್ರೇನ್‌ನಿಂದ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ – ಅವಳು ಚಪ್ಪಡಿಯ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಇದು ಭಯೋತ್ಪಾದನೆಯಲ್ಲ ಎಂದು ಹೇಳುವುದು ತುಂಬಾ ಕಷ್ಟ ಎಂದು ಅವರು ಹೇಳಿದ್ದರು. ಬಳಿಕ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.

ಗಮನಾರ್ಹವೆಂದರೆ, ವ್ಲಾಡಿಮಿರ್ ಮತ್ತು ಆಂಟೊವ್ ಸೇರಿದಂತೆ ನಾಲ್ವರು ರಷ್ಯಾದ ಪ್ರವಾಸಿಗರು ಡಿಸೆಂಬರ್ 21 ರಂದು ಕಂಧಮಾಲ್ ಜಿಲ್ಲೆಯ ದರಿಂಗ್‌ಬಾಡಿಗೆ ಭೇಟಿ ನೀಡಿದ ನಂತರ ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು. ‘‘ಡಿ.21ರಂದು ರಾಯಗಡದ ಹೊಟೇಲ್‌ನಲ್ಲಿ ತಂಗಲು ನಾಲ್ವರು ಬಂದಿದ್ದರು. ಡಿ.22ರಂದು ಬೆಳಗ್ಗೆ ಅವರಲ್ಲಿ ಒಬ್ಬರು (ಬಿ ವ್ಲಾಡಿಮಿರ್) ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಸ್ನೇಹಿತ, ಪಾವೆಲ್ ಆಂಟೊನೊವ್ ತಮ್ಮ ಸ್ನೇಹಿತನ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರು ಡಿಸೆಂಬರ್ 25 ರಂದು ನಿಧನರಾದರು” ಎಂದು ರಾಯಗಡ ಎಸ್ಪಿ, ವಿವೇಕಾನಂದ ಶರ್ಮಾ ಹೇಳಿದರು.
ಆಂಟೋವ್ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. 2019 ರಲ್ಲಿ ಫೋರ್ಬ್ಸ್ ರಷ್ಯಾ ನಡೆಸಿದ ವಿಶ್ಲೇಷಣೆಯಲ್ಲಿ ಅವರ ಘೋಷಿತ ವಾರ್ಷಿಕ ಗಳಿಕೆಯನ್ನು £ 130 ಮಿಲಿಯನ್ ಎಂದು ಪಟ್ಟಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement