ಧಾರವಾಡ: ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಹಾವಿನ ತಲೆಯಲ್ಲಿದ್ದ ಕ್ಯಾನ್ಸರ್‌ ತರಹದ ಗಡ್ಡೆ ಹೊರತೆಗೆದ ವೈದ್ಯರು..!

ಧಾರವಾಡ : ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಅದರಲ್ಲಿದ್ದ ಕ್ಯಾನ್ಸರ್ ಕಾರಕ ಗಡ್ಡೆಯನ್ನು ಹೊರತೆಗೆದ ಅಪರೂಪದ ಘಟನೆ ಧಾರವಾಡದಲ್ಲಿ ನಡೆದಿದೆ.
ಪ್ರಾಣಿ ವೈದ್ಯ ಡಾ. ಅನಿಲಕುಮಾರ ಪಾಟೀಲ ಅವರು ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮನೆಯೊಂದರಲ್ಲಿ ಹಾವು ಸೇರಿಕೊಂಡಿರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಸೋಮಶೇಖರ ಅವರು ಆ ಮನೆಗೆ ಹೋಗಿ ನೋಡಿದಾಗ ಅದು ಟ್ರಿಂಕೆಟ್ ( ಆಭರಣ) ಎಂಬ ವಿಷಕಾರಿಯಲ್ಲದ ಹಾವಾಗಿತ್ತು. ಹಾವನ್ನು ರಕ್ಷಿಸಲಾಯಿತು. ಆಗ ಹಾವಿನ ತಲೆಯಲ್ಲಿ ಗೆಡ್ಡೆ ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅದನ್ನು ಪ್ರಾಣಿ ವೈದ್ಯ ಡಾ.ಅನಿಲಕುಮಾರ ಪಾಟೀಲ ಅವರ ಬಳಿ ಕರೆದೊಯ್ಯಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯಲು ನಿರ್ಧರಿಸಿದರು. ಬಳಿಕ ಅದಕ್ಕೆ ಯಶಸ್ವಿಯಾಗಿ ಅವರು ಶಸ್ತ್ರಚಿಕಿತ್ಸೆ ನಡೆಸಿದರು.
ಹಾವುಗಳು ಸೂಕ್ಷ್ಮ ಜೀವಿಗಳಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡುವುದು ಒಂದು ಸವಾಲು. ಈ ಟ್ರಿಂಕೆಟ್ ಹಾವಿಗೆ ತಲೆ ಮತ್ತು ಕಣ್ಣಿನ ಭಾಗದಲ್ಲಿ ಗಡ್ಡೆ ಬೆಳೆದಿತ್ತು. ಸುಮಾರು ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆಗೊಳಪಡಿಸಿ ಗೆಡ್ಡೆಯನ್ನು ಹೊರ ತೆಗೆಯಲಾಯಿತು ಎಂದು ಡಾ.ಅನಿಲಕುಮಾಲ ಪಾಟೀಲ ಹೇಳಿದ್ದಾರೆ.
ಹಾವಿಗೆ ಎರಡ್ಮೂರು ದಿನಗಳ ಕಾಲ ಡ್ರೆಸ್ಸಿಂಗ್ ಅಗತ್ಯವಿದೆ.ಸೋಮಶೇಖರ ಹಾವನ್ನು ಆರೈಕೆ ಮಾಡಲಿದ್ದಾರೆ ಎಂದು ಹೇಳಿರುವ ವೈದ್ಯರು ಮುಂದೆ ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ಗಡ್ಡೆ ಬೆಳೆಯುತ್ತದೆಯೇ ಎಂಬುದನ್ನೂ ಗಮನಿಸಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement