ಮತ್ತೆ ಕಾಂಗ್ರೆಸ್‌ಗೆ ಮರಳುವುದಿಲ್ಲ : ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ಗುಲಾಂ ನಬಿ ಆಜಾದ್‌

ನವದೆಹಲಿ : ಹಿರಿಯ ರಾಜಕಾರಣಿ ಮತ್ತು ಹೊಸದಾಗಿ ರೂಪುಗೊಂಡ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ 52 ವರ್ಷಗಳ ಕಾಂಗ್ರೆಸ್‌ ಸಂಬಂಧ ಮುರಿದುಕೊಂಡು ಬಂದಿದ್ದು, ಮತ್ತೆ ಕಾಂಗ್ರೆಸ್‌ಗೆ ಮರಳುವ ಯಾವುದೇ ಇರಾದೆಯಿಲ್ಲ ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಆಜಾದ್‌ ಅವರು, ಅವರು ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಾರೆ ಎಂದು ಸೂಚಿಸುವ ವರದಿಗಳು ಕಾಂಗ್ರೆಸ್‌ನ ಕೆಲವು ಪಟ್ಟಭದ್ರ ನಾಯಕರು ಸೃಷ್ಟಿಸಿದ್ದಾರೆ ಮತ್ತು ಅವುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರು ಹೇಳಿದರು.
ನಾನು ಯಾವುದೇ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿಲ್ಲ ಮತ್ತು ಯಾರೂ ನನ್ನನ್ನು ಕರೆದಿಲ್ಲ. ಹಾಗಾಗಿ ಈ ರೀತಿಯ ಕಥೆಗಳನ್ನು ಮಾಧ್ಯಮಗಳಲ್ಲಿ ಏಕೆ ಬಿಂಬಿಸಲಾಗುತ್ತದೆ ಎಂದು ನಾನು ಆಶ್ಚರ್ಯ ಪಡುತ್ತೇನೆ” ಎಂದು ಆಜಾದ್ ಹೇಳಿದರು.

ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಅನಿಶ್ಚಿತತೆಯ ಭಾವನೆಯನ್ನು ಮೂಡಿಸಲು ಮತ್ತು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ನಾಯಕರು ಈ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆಜಾದ್ ಹೇಳಿದರು. ಏನೇ ಬಂದರೂ ನಾವು ಬಲಿಷ್ಠರಾಗಿ ಹೊರಹೊಮ್ಮುತ್ತೇವೆ ಎಂದರು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಆಜಾದ್, “ನಾನು ಯಾರೊಂದಿಗೂ ಯಾವುದೇ ಕೆಸರೆರಚಾಟದಲ್ಲಿ ತೊಡಗಿಲ್ಲ, ನಾನು ಏನು ಹೇಳಬೇಕೋ ಅದನ್ನು ನನ್ನ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದೇನೆ. ಇದಾದ ನಂತರ ನಾನು ನನ್ನದೇ ಹಾದಿಯಲ್ಲಿದ್ದೇನೆ. ನನಗೆ ನಂಬಿಕೆ ಇಟ್ಟಿರುವ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯು ಮುಂದಿನ ತಿಂಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದಾಗ ಅದರಲ್ಲಿ ಸೇರಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಆಜಾದ್ “ನನಗೆ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement