ಪವಿತ್ರಾ ಲೋಕೇಶ ಜೊತೆ ಶೀಘ್ರದಲ್ಲೇ ಮದುವೆ: ವೀಡಿಯೊ ಮೂಲಕ ಹೇಳಿಕೊಂಡ ನಟ ನರೇಶ

ನಟ ನರೇಶ್ ತಮ್ಮ ಟ್ವಿಟರ್ ಮೂಲಕ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ನಟಿ ಪವಿತ್ರಾ ಲೋಕೇಶ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಕಿರು ವೀಡಿಯೊ ಕ್ಲಿಪ್‌ ಮೂಲಕ ಪವಿತ್ರಾ ಲೋಕೇಶ ಜೊತೆಗೆ ವಿವಾಹವನ್ನು ನರೇಶ್ ಘೋಷಿಸಿದ್ದಾರೆ. ‘ಹೊಸ ವರ್ಷ, ಹೊಸ ಆರಂಭ, ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂಬ ಶೀರ್ಷಿಕೆಯಡಿ, ನಟ ಈ ವೀಡಿಯೊದೊಂದಿಗೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇವರಿಬ್ಬರ ಸ್ನೇಹದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಸಂಬಂಧದ ಬಗ್ಗೆ ಕೆಲ ದಿನಗಳಿಂದ ಸಾಕಷ್ಟು ಊಹಾಪೋಹಗಳು ನಡೆಯುತ್ತಿವೆ. ನರೇಶ ಮತ್ತು ಪವಿತ್ರಾ ತಮ್ಮ ವೃತ್ತಿಜೀವನದಲ್ಲಿ ಕೆಲವು ಉತ್ತಮ ಪಾತ್ರಗಳನ್ನು ಮಾಡಿದ ಅದ್ಭುತ ಕಲಾವಿದರು.

ಇಂದು, ಶನಿವಾರ ತೆಲುಗು ನಟ ನರೇಶ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್‌ ಮಾಡಿದ ವೀಡಿಯೊದಲ್ಲಿ , ತಾವು ಮತ್ತು ಪವಿತ್ರಾ ಲೋಕೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಖಚಿತಪಡಿಸಿದ್ದಾರೆ. ಈ ಹೊಸ ವೀಡಿಯೋದಲ್ಲಿ ಅವರು ಪವಿತ್ರಾ ಅವರೊಂದಿಗೆ ಕೇಕ್‌ ಕತ್ತರಿಸಿ ಪರಸ್ಪರ ತಿನ್ನಿಸಿಕೊಂಡಿದ್ದಾರೆ ಹಾಗೂ ಮುತ್ತು ಕೊಡುತ್ತಿರುವುದು ಕಂಡುಬಂದಿದೆ.

ನರೇಶ ಅವರು ತಾವು ಹೊಸ ವರ್ಷವನ್ನು ಹೊಸ ಆರಂಭಗಳೊಂದಿಗೆ ಪ್ರಾರಂಭಿಸುತ್ತಿರುವುದಾಗಿ ಬರೆದಿದ್ದಾರೆ. ಈ ವಿಶೇಷ ಸುದ್ದಿಯನ್ನು ಹಂಚಿಕೊಂಡು ಅವರು ಎಲ್ಲರ ಆಶೀರ್ವಾದವನ್ನು ಕೋರಿದ್ದಾರೆ. ಇದು ನಿಖರವಾಗಿ ಏನು ಎಂಬುದನ್ನು ಸಮಯವೇ ಹೇಳಬೇಕು ಆದರೆ ಸದ್ಯಕ್ಕೆ, ಈ ಟ್ವೀಟ್ ಸದ್ದು ಮಾಡುತ್ತಿದೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement