ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಹೆಚ್ಚಿಸಿವೆ. ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿದ್ದಾರೆ. ಆದಾಗ್ಯೂ, ಗೃಹಬಳಕೆಯ ಸಿಲಿಂಡರ್ಗಳ ದರಗಳನ್ನು ಬದಲಾವಣೆ ಮಾಡಲಾಗಿಲ್ಲ.
ವಾಣಿಜ್ಯ LPG ಸಿಲಿಂಡರ್ ಹೆಚ್ಚಳದ ಬೆಲೆಗಳು:
ತೈಲ ಮಾರುಕಟ್ಟೆ ಕಂಪನಿಗಳು (OMC) ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್ಗಳ ದರವನ್ನು 25 ರೂ.ವರೆಗೆ ಹೆಚ್ಚಳ ಮಾಡಿದ್ದು, ಈ ಕ್ರಮವು ರೆಸ್ಟೋರೆಂಟ್ಗಳು, ಹೋಟೆಲ್ಗಳಿಗೆ ದುಬಾರಿಯಾಗಿಸುತ್ತದೆ. ಆದಾಗ್ಯೂ, ಇದು ಸಾಮಾನ್ಯ ಜನರ ಬಜೆಟ್ನ ಬೆಲೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಗೃಹ ಬಳಕೆ LPG ಸಿಲಿಂಡರ್ ದರ ಬದಲಾಗದೆ ಉಳಿದಿದೆ.
ದೊಡ್ಡ ಮಹಾನಗರಗಳಲ್ಲಿ ಇತ್ತೀಚಿನ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರಗಳು
ದೆಹಲಿ – ರೂ 1768 / ಸಿಲಿಂಡರ್
ಮುಂಬೈ – ರೂ 1721/ ಸಿಲಿಂಡರ್
ಕೋಲ್ಕತ್ತಾ – ರೂ 1870/ ಸಿಲಿಂಡರ್
ಚೆನ್ನೈ – ರೂ 1917/ ಸಿಲಿಂಡರ್
ನಿಮ್ಮ ಕಾಮೆಂಟ್ ಬರೆಯಿರಿ