ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಕ್ರಿಕೆಟಿಗ ರಿಷಭ್ ಪಂತ್ ಸ್ಥಳಾಂತರ

ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ರಿಷಭ ಪಂತ್‍ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು, ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಸುಸಜ್ಜಿತ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.
ಡಿಡಿಸಿಎ ನಿರ್ದೇಶಕ ಶ್ಯಾಂ ಶರ್ಮಾ ಅವರು ರಿಷಭ್ ಪಂತ್‍ ಅವರ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಡಿಸೆಂಬರ್ 30ರಂದು ಕಾರಿನ ಅಪಘಾತದಲ್ಲಿ ತೀವ್ರ ತರವಾದ ಗಾಯಕ್ಕೆ ಒಳಗಾಗಿದ್ದ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರು ಈಗ ಚೇತರಿಕೆಯ ಹಾದಿಯಲ್ಲಿದ್ದು ಅವರನ್ನು ನಿನ್ನೆ ಸಂಜೆ ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಿಷಭ್ ಪಂತ್‍ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ನಂಜು ಆಗದಿರಲಿ ಎಂಬ ದೃಷ್ಟಿಯಿಂದ ಅವರನ್ನು ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಬಿಸಿಸಿಐ ರಿಷಭ್ ಪಂತ್ ಚಿಕಿತ್ಸೆಯ ಹೊಣೆ ಹೊತ್ತಿದೆ. ರಿಷಭ್ ಪಂತ್ ಅವರ ಬೆನ್ನಿನ ಚರ್ಮವು ಸಾಕಷ್ಟು ಸುಟ್ಟು ಹೋಗಿದ್ದು, ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇದೆ. ಅವರಿಗೆ ಡೆಹ್ರಾ ಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲೇ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೋ, ನವದೆಹಲಿಯ ಆಸ್ಪತ್ರೆಗೆ ಅವರನ್ನು ಏರ್‌ ಲಿಫ್ಟ್ ಮಾಡಬೇಕೋ ಎಂಬುದರ ಬಗ್ಗೆ ಬಿಸಿಸಿಐ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ಡಿಸೆಂಬರ್ 30 ರಂದು ರಿಷಭ್ ಪಂತ್ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಡೆಹ್ರಾಡೂನ್‍ನ ರೊರ್ಕಿ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಪಂತ್ ಅವರ ಹಣೆಯ ಮೇಲೆ ಗಾಯಗಳಾಗಿದ್ದು, ಬಲ ಮೊಣಕಾಲಿನ ಅಸ್ಥಿರಜ್ಜು ಹರಿದುಹೋಗಿದೆ ಮತ್ತು ಅವರ ಬಲ ಮಣಿಕಟ್ಟು, ಪಾದದ ಮತ್ತು ಕಾಲ್ಬೆರಳುಗಳಿಗೆ ಗಾಯವಾಗಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement