ಸಾಗರ: ಬಜರಂಗದಳ ಸಂಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಯತ್ನ, ಸ್ವಲ್ಪದರಲ್ಲೇ ಅಪಾಯದಿಂದ ಪಾರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ್ದು, ಆದರೆ, ಯತ್ನ ವಿಫಲವಾಗಿದೆ. ಹಿಂದೂ ಕಾರ್ಯಕರ್ತ ಸ್ವಲ್ಪದರಲ್ಲೇ ಬಚಾವಾಗಿದ್ದಾನೆ.
ಬಜರಂಗದಳ ಸಾಗರ ನಗರ ಸಹ ಸಂಚಾಲಕ ಸುನೀಲ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಈ ಹತ್ಯೆಯ ನಡೆದಿದೆ. ಭಾನುವಾರ ಶಿವಮೊಗ್ಗದಲ್ಲಿ ನಡೆದಿದ್ದ ಶೋಭಾ ಯಾತ್ರೆಯಲ್ಲಿ ಸುನೀಲ ಭಾಗವಹಿಸಿದ್ದ. ಅದರ ಮರುದಿನವೇ ಅವರ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಬಜರಂಗದಳ ನಗರ ಸಹ ಸಂಚಾಲಕ ಸುನೀಲ ಇಂದು, ಸೋಮವಾರ ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ನಗರದ ಬಿ.ಹೆಚ್.ರಸ್ತೆ ಆಭರಣ ಶೋ ರೂಂ ಬಳಿ ಬರುತ್ತಿದ್ದಂತೆ ಅವರ ಮೇಲೆ ಮಚ್ಚಿನಿಂದ ದಾಳಿ ನಡೆದಿದೆ. ಈ ಮೊದಲೆ ಶೋ ರೂಂ ಬಳಿ ಬಂದು ನಿಂತಿದ್ದ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ ಮಾರಕಾಸ್ತ್ರ ತೆಗೆದು ಸುನೀಲನತ್ತ ಬೀಸಿದ್ದಾನೆ. ಸ್ವಲ್ಪದರಲ್ಲಿಯೇ ಸುನೀಲ ಪಾರಾಗಿದ್ದಾರೆ.

ಅಪಾಯದ ಮುನ್ಸೂಚನೆ ಸಿಗುತ್ತಲೇಸುನಿಲ್ ಬೈಕನ್ನು ಹಿಂದಕ್ಕೆ ತೆಗೆದುಕೊಂಡು ನಂತರ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಸಮೀರ್ ಎಂಬಾತ ಮಾರಕಾಸ್ತ್ರ ಬೀಸಿದ್ದರೂ ಕೂದಲೆಳೆ ಅಂತರದಲ್ಲಿ ಸುನೀಲ್ ಪಾರಾಗಿರೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾಳಿಗೆ ಯತ್ನ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಮ್ಮ ಮೇಲಿನ ದಾಳಿಯ ಬಗ್ಗೆ ಸುನೀಲ ಪೊಲೀಸರಿಗೆ ದೂರು ನೀಡಿದ್ದು, ಶೋಭಾ ಯಾತ್ರೆಯ ಸಂದರ್ಭದಲ್ಲಿ ತನ್ನ ಜೊತೆಗೆ ಜಗಳ ಮಾಡಿದ್ದ ಸಮೀರ್ ಎಂಬಾತ ತನ್ನ ಮೇಲೆ ಸೋಮವಾರ ಮಚ್ಚಿನಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಭಾನುವಾರ ಶಿವಮೊಗ್ಗ ನಗರದಲ್ಲಿ ಬಜರಂಗದಳದ ವತಿಯಿಂದ ಶೌರ್ಯ ಯಾತ್ರೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುನೀಲ ಬೈಕಿನಲ್ಲಿ ತೆರಳುತ್ತಿದ್ದರು. ಆಗ ಬಿ.ಹೆಚ್.ರಸ್ತೆಯಲ್ಲಿ ಸುನಿಲ್ ಬೈಕಿಗೆ ತಾಗುವಂತೆ ಬೈಕನ್ನು ಹತ್ತಿರಕ್ಕೆ ತಂದ ಯುವಕರ ಗುಂಪು, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದೆ ಎಂದು ಸುನೀಲ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇಂದು, ಸೋಮವಾರ ಸಾಗರ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಪ್ರತಿಭಟನೆ ನಡೆಸಿದರು. ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಸುನೀಲ ಮೇಲೆ ಹಲ್ಲೆ ಯತ್ನ ಖಂಡಿಸಿ ಸಾಗರ ನಗರದಲ್ಲಿ ಬಂದ್ ಮಾಡಲು ಹಿಂದೂ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ ಎಂದು ವರದಿಯಾಗಿದೆ. ಜ.10ರಂದು ಸಾಗರ ಪಟ್ಟಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement