ಪೆನ್ಸಿಲ್ವೇನಿಯಾದ 4 ವಿಶ್ವ ವಿದ್ಯಾಲಯಗಳ ಜೊತೆ ಕರ್ನಾಟಕದ ನಾಲ್ಕು ವಿವಿಗಳ ಒಡಂಬಡಿಕೆ

ಬೆಂಗಳೂರು: ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ಹಲವು ವಿಶ್ವ ವಿದ್ಯಾಲಯಗಳೊಂದಿಗೆ ಬೆಂಗಳೂರು ನಗರ, ಬೆಂಗಳೂರು, ಮಂಗಳೂರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮಂಗಳವಾರ ಶೈಕ್ಷಣಿಕ ಒಡಂಬಡಿಕೆಗಳಿಗೆ ಅಂಕಿತ ಹಾಕಿದವು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ರಾಜ್ಯದ ನಾಲ್ಕೂ ವಿವಿಗಳ ಕುಲಪತಿಗಳು, ಪೆನ್ಸಿಲ್ವೇನಿಯಾ ಸ್ಟೇಟ್ ಸಿಸ್ಟಂ ಆಫ್ ಹೈಯರ್ ಎಜುಕೇಶನ್ ನಿಯೋಗದ ಸದಸ್ಯರು ಈ ಒಡಂಬಡಿಕೆಗೆ ಸಹಿ ಹಾಕಿದರು. ಒಡಂಬಡಿಕೆಯ ಬಳಿಕ ನಿಯೋಗದ ಸದಸ್ಯರು ಬೆಂಗಳೂರು ವಿವಿ ಇರುವ ಜ್ಞಾನಭಾರತಿ ಕ್ಯಾಂಪಸ್ ವೀಕ್ಷಿಸಿದರು.
ಉನ್ನತ ಶಿಕ್ಷಣ ಸುಧಾರಣೆಯ ಅಂಗವಾಗಿ ಈ ಉಪಕ್ರಮದ ಅಂಗವಾಗಿ ಬೆಂಗಳೂರು ನಗರ, ಬೆಂಗಳೂರು ಮತ್ತು ಮಂಗಳೂರು ವಿ.ವಿ.ಗಳು ಪೆನ್ಸಿಲ್ವೇನಿಯಾದ ಕಾಮನ್ವೆಲ್ತ್, ಇಂಡಿಯಾನಾ ಮತ್ತು ಕಟ್ಜ್ ಟೌನ್ ವಿವಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿವೆ. ಬೆಳಗಾವಿಯ ವಿಟಿಯು ಅಲ್ಲಿನ‌ ಮಿಲ್ಲರ್ಸ್ವಿಲ್ ವಿವಿ ಜತೆ ಒಡಂಬಡಿಕೆಗೆ ಸಹಿ ಹಾಕಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಒಡಂಬಡಿಕೆಯ ಅನ್ವಯ ಬೆಂಗಳೂರು ನಗರ ವಿವಿಯಲ್ಲಿ ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್, ಬಿಜಿನೆಸ್ ಅಡ್ಮಿನಿಸ್ಟ್ರೇಶನ್, ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಮತ್ತು ಸ್ಪೋರ್ಟ್ಸ್ ಸೈಕಾಲಜಿ ವಿಷಯಗಳಲ್ಲಿ ಮತ್ತು ಬೆಂಗಳೂರು ವಿವಿಯಲ್ಲಿ ಭೂಗೋಳ ಹಾಗೂ ಜಿಯೋ ಇನ್ಫರ್ಮೇಶನ್ ಸೈನ್ಸ್ ಪದವಿ ಕೋರ್ಸುಗಳ ವಿಭಾಗಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಆ ದೇಶದ ವಿವಿಗಳಿಗೆ ಹೋಗಿ ವ್ಯಾಸಂಗ ಮಾಡಲು ಅನುಕೂಲವಾಗುವ ಹಾಗೆ ಟ್ವಿನ್ನಿಂಗ್ ಪ್ರೊಗ್ರಾಂ ಆರಂಭಿಸುವುದಕ್ಕೂ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಸ್ಟ್ರಾಟೆಜಿಕ್ ಕಮ್ಯುನಿಕೇಶನ್ಸ್ ಮತ್ತು ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ಹಾಗೂ ವಿಟಿಯು ವ್ಯಾಪ್ತಿಯಲ್ಲಿ ಜಿಯೋ ಇನ್ಫರ್ಮೇಶನ್ ಸೈನ್ಸ್ ಡಿಗ್ರಿ ಕೋರ್ಸುಗಳಿಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ವಿವಿಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹೊಸ ಸಂಶೋಧನೆ ಉತ್ತೇಜಿಸಲಾಗುತ್ತದೆ. ಈ ಮೂಲಕ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟವನ್ನು ತರಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕುಲಪತಿಗಳಾದ ಡಾ.ಜಯಕರ, ಪ್ರೊ.ಲಿಂಗರಾಜ ಗಾಂಧಿ, ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪೆನ್ಸಿಲ್ವೇನಿಯಾ ನಿಯೋಗದ ಡಾ. ಪೀಟರ್ ಗಾರ್ಲ್ಯಾಂಡ್, ಡಾ.ಅನಿತಾ ಒಡಂಬಡಿಕೆಗೆ ಸಹಿ ಹಾಕಿದರು. ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ಡಾ.ತಾಂಡವ ಗೌಡ ಇದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement