ಕುಮಟಾ: ವಿನಾಯಕ ರೆಕ್ಸಿನ್ ಹೌಸ್ ವಿಜಯೋತ್ಸವ – ಶಾಪಿಂಗ್‌ ಉತ್ಸವದಲ್ಲಿ ಗೌರೀಶ ಭಂಡಾರಿಗೆ ಕಾರು ಬಹುಮಾನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳೆಯ ಮೀನುಮಾರುಕಟ್ಟೆ ರಸ್ತೆಯ ಜಯನಗರದಲ್ಲಿರುವ ವಿನಾಯಕ ರೆಕ್ಸಿನ್ ಹೌಸ್‌ನಲ್ಲಿ ಕನ್ನಡದ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ ನಡೆದ“ವಿಜಯೋತ್ಸವ – ಶಾಪಿಂಗ್ ಉತ್ಸವ” ಫಲಿತಾಂಶ ಪ್ರಕಟವಾಗಿದೆ. ಹತ್ತು ಸಾವಿರ ರೂ.ಗಳ ಬೆಡ್ ಖರೀದಿಸಿದ್ದ ಗೌರೀಶ ಎಂ. ಭಂಡಾರಿ ಮಣಕಿ ಕುಮಟಾ ಅವರಿಗೆ ಅದೃಷ್ಟ ಒಲಿದು ಬಂದಿದ್ದು, ಪ್ರಥಮ ಬಹುಮಾನ ಸಿಕ್ಕಿದೆ.
ಪ್ರಥಮ ಬಹುಮಾನವಾಗಿ ಗೌರೀಶ ಎಂ. ಭಂಡಾರಿ ಅವರು ಕಾರು ಪಡೆಯಲಿದ್ದಾರೆ. ಈ ಕುರಿತಾಗಿ ವಿನಾಯಕ ರೆಕ್ಸೀನ್ ಹೌಸ್ ಮಾಲೀಕ ವಿನಾಯಕ ಹೆಗಡೆಕಟ್ಟೆ ಮಾಹಿತಿ ನೀಡಿದ್ದಾರೆ.
“ಅದೃಷ್ಟ ನಿಮ್ಮದು ಕೊಡುಗೆ ನಮ್ಮದು” ಎಂಬ ಶೀರ್ಷಿಕೆಯಲ್ಲಿ ಗ್ರಾಹಕರಿಗೆ ವಿವಿಧ ಕಂಪನಿಗಳ ವಸ್ತುಗಳ ಮೇಲೆ ರಿಯಾಯತಿ ಮಾರಾಟ ಹಾಗೂ ಬಂಪರ್ ಬಹುಮಾನವಾಗಿ 2 ಕಾರ್, ಬೈಕ್, ರೆಫ್ರಿಜರೇಟರ್, ಟಿ.ವಿ, ಬೈಸಿಕಲ್, ಪ್ರೆಷರ್ ಕುಕ್ಕರ್, ಮಿಕ್ಸರ್, ಗ್ರೈಂಡರ್, ಗ್ಯಾಸ್ ಸ್ಟೌ, ಸೇಫ್ ಲಾಕರ್ ಹಾಗೂ ಇನ್ನೂ ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು. ಬಹುಮಾನ ವಿಜೇತರಿಗೆ ಅಂಗಡಿ ಮಾಲೀಕರು ಹಾಗೂ ಸಂಘಟಕರು ಅಭಿನಂದನೆ ಸಲ್ಲಿಸಿದ್ದಾರೆ.

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement