ಹುಬ್ಬಳ್ಳಿಗೆ ನಾಳೆ ಪ್ರಧಾನಿ ಮೋದಿ ಆಗಮನ : ಹುಬ್ಬಳ್ಳಿ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಜನವರಿ 12ರಂದು ನಡೆಯುತ್ತಿರುವ 26ನೇ ಯುವಜನೋತ್ಸವ-2023 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನಿಮಿತ್ತ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಹಾಗೂ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದೆ.
ನವಲಗುಂದ ಕಡೆಯಿಂದ ಬರುವ ಬಸ್ಸುಗಳು ಕೆ.ಎಚ್. ಪಾಟೀಲ ರಸ್ತೆ ಶೃಂಗಾರ ಕ್ರಾಸ್ ಬಳಿ ಪ್ರಯಾಣಿಕರನ್ನು ಇಳಿಸಬೇಕು. ಗದಗ ರಸ್ತೆ ವಿನೋಭಾ ನಗರದ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ನವಲಗುಂದ ರಸ್ತೆ ಕಡೆಯಿಂದ ಸರ್ವೋದಯ ಸರ್ಕಲ್, ಶೃಂಗಾರ ಕ್ರಾಸ್, ಸೇಂಟ್ ಎಂಡ್ರಿಯೋ ಸ್ಕೂಲ್, ಆರ್‌ಪಿಎಫ್ ಕ್ರಾಸ್ ಮೂಲಕ ವಿನೋಭಾ ನಗರ ಮೈದಾನ ತಲುಪಬೇಕು.
ಗದಗ ಕಡೆಯಿಂದ ಬರುವ ಬಸ್ಸುಗಳು ಗದಗ ಕೆಳ ಸೇತುವೆ ಅಂಬೇಡ್ಕರ ಮೂರ್ತಿಯ ವೃತ್ತದಲ್ಲಿ ಜನರನ್ನು ಇಳಿಸಬೇಕು. ಚಿಲ್ಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಗದಗ ರಸ್ತೆ ಕೆಳ ಸೇತುವೆ ಮೂಲಕ ಅಂಬೇಡ್ಕರ ಮೂರ್ತಿ ಸುತ್ತುವರೆದು ಗದಗ ರಸ್ತೆಯ ಚಿಲ್ಲಿ ಮೈದಾನದಲ್ಲಿ ಪಾರ್ಕಿಂಗ್‌ ಮಾಡಬೇಕು.
ಗಬ್ಬೂರ ರಸ್ತೆ ಕಡೆಯಿಂದ ಬರುವ ಬಸ್ಸುಗಳು ಪೋಲೀಸ್ ಕ್ವಾರ್ಟರ್ಸ್ ಹತ್ತಿರ ಜನರನ್ನು ಇಳಿಸಬೇಕು. ಗಿರಣಿಚಾಳ ಮೈದಾನ ಹಾಗೂ ಎಂ.ಟಿ. ಮಿಲ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಬಂಕಾಪುರ ಚೌಕ್, ಕಮರಿಪೇಟೆ, ಮಿರ್ಜಾನಕರ ಪೆಟ್ರೋಲ್ ಪಂಪ್ ಸುತ್ತುವರೆದು ಗಿರಣಿಚಾಳ ಮೈದಾನ ಅಥವಾ ಎಂ.ಟಿ. ಮಿಲ್ ಮೈದಾನ ತಲುಪಬೇಕು.
ಕಾರವಾರ ರಸ್ತೆ ಕಡೆಯಿಂದ ಬರುವ ಬಸ್ಸುಗಳು ಗ್ಲಾಸ್ ಹೌಸ್ ಬಾವಿ ಹತ್ತಿರ ಜನರನ್ನು ಇಳಿಸಬೇಕು. ಗ್ಲಾಸ್ ಹೌಸ್ ಬಾವಿಯ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಕಾರವಾರ ರಸ್ತೆ ಕಡೆಯಿಂದ ಬರುವ ಬಸ್ಸುಗಳು ಎಂ.ಟಿ. ಮಿಲ್, ಗ್ಲಾಸ್ ಹೌಸ್ ಬಾವಿ ಮೈದಾನಕ್ಕೆ ತಲುಪಿ ಪಾರ್ಕಿಂಗ್‌ ಮಾಡಬೇಕು.
ಧಾರವಾಡ ನಗರ ಕಡೆಯಿಂದ ಬರುವ ಬಸ್ಸುಗಳು ಹಳೇಬಸ್ ನಿಲ್ದಾಣದ ಮುಂದೆ ಜನರನ್ನು ಇಳಿಸಬೇಕು. ಹೊಸೂರನ ರಾಯ್ಕರ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ನವನಗರ, ಬಿವಿಬಿ, ಹೊಸೂರ, ಲಕ್ಷ್ಮೀ ವೇ ಬ್ರಿಡ್ಜ್ ಮೂಲಕ ಗ್ಲಾಸ್ ಹೌಸ್ ಬಾವಿ ತಲುಪಬೇಕು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

11 ಮತ್ತು 12 ರಂದು ವಾಹನಗಳ ಸಂಚಾರ ನಿಷೇಧ:
ಜ. 11ಮತ್ತು 12ರಂದು ಮಧ್ಯಾಹ್ನ 1:೦೦ರಿಂದ ಸಂಜೆ 7:೦೦ ಗಂಟೆ ವರೆಗೆ ಗೋಕುಲ ರಸ್ತೆ ಮಾಪ್ಸಲ್ ಡಿಪೋದಿಂದ ಸಿದ್ದೇಶ್ವರ ಪಾರ್ಕ್, ಶಿರೂರ ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರ ರಸ್ತೆ, ಭಗತಸಿಂಗ್ ವೃತ್ತ, ಪ್ರವಾಸಿ ಮಂದಿರ ಎದುರು (ಐಬಿ), ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್, ರೈಲ್ವೆ ಮೈದಾನದ ಯುವಜನೋತ್ಸವ ಕಾರ್ಯಕ್ರಮ ಸ್ಥಳದವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.

ಬಸ್ಸುಗಳ ಮಾರ್ಗ ಬದಲಾವಣೆ:
ಕಾರವಾರ ರಸ್ತೆಯಿಂದ ಬರುವ ಬಸ್ಸುಗಳಿಗೆ ಕಾರವಾರ ರಸ್ತೆ ಪ್ಲಾಜಾ (ಅಂಡರ್ ಬ್ರಿಡ್ಜ್) ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ನಗರದ ಒಳಗಡೆ ಸಂಚಾರ ನಿಷೇಽಸಲಾಗಿದೆ. ಲಾಂಗ್ ರೂಟ್‌ಬಸ್ಸುಗಳು ರಿಂಗ್ ರೋಡ್ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು.
ಬೆಂಗಳೂರು ರಸ್ತೆಯಿಂದ ಬರುವ ಬಸ್ಸುಗಳಿಗೆ ಗಬ್ಬೂರ ಬಪಾಸ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್ಸುಗಳು ರಿಂಗ್ ರೋಡ್ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು.
ಗದಗ ರಸ್ತೆಯಿಂದ ಬರುವ ಬಸ್ಸುಗಳಿಗೆ ಗದಗ ರಸ್ತೆ ರೈಲ್ವೆ ಲೋಕೋ ಶೆಡ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್ಸುಗಳು ರಿಂಗ್ ರಸ್ತೆ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು.
ನವಲಗುಂದ ಕಡೆಯಿಂದ ಬರುವ ಬಸ್ಸುಗಳಿಗೆ ಆಕ್ಸಫರ್ಡ್ ಕಾಲೇಜ್ ರೈಲ್ವೆ ಬ್ರಿಡ್ಜ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದ್ದು, ಲಾಂಗ್ ರೂಟ್‌ಬಸ್ಸುಗಳು ರಿಂಗ್ ರಸ್ತೆ ಹಾಗೂ ಬಪಾಸ್ ಮುಖಾಂತರ ಸಂಚರಿಸಬೇಕು.
ಧಾರವಾಡ ಕಡೆಯಿಂದ ತಾರಿಹಾಳ ಬ್ರಿಡ್ಜ್ ಕಡೆಗೆ ಬರುವ ಲಾಂಗ್ ರೂಟ್ ಬಸ್ಸುಗಳಿಗೆ ತಾರಿಹಾಳ ಬ್ರಿಡ್ಜ್ ಹತ್ತಿರ ತಾತ್ಕಾಲಿಕ ನಿಲುಗಡೆ ಕಲ್ಪಿಸಿದ್ದು, ಲಾಂಗ್ ರೂಟ್ ಬಸ್ಸುಗಳು ಬಪಾಸ್ ಮುಖಾಂತರ ಸಂಚರಿಸಬೇಕು.
ಹುಬ್ಬಳ್ಳಿ-ಧಾರವಾಡ ನಗರದ ಮಧ್ಯೆ ಸಂಚರಿಸುವ ಚಿಗರಿ ಬಸ್ಸುಗಳು, ಬೇಂದ್ರೆ ಬಸ್ಸುಗಳು, ನಗರ ಸಾರಿಗೆ ಬಸ್ಸುಗಳು ಧಾರವಾಡ ಕಡೆಯಿಂದ ಬಂದು ಕೆಎಂಸಿ ಆಸ್ಪತ್ರೆಯ ಒಳಗಡೆ ಹೋಗಿ ಟರ್ನ್ ಮಾಡಿಕೊಂಡು ಮರಳಿ ಧಾರವಾಡ ಕಡೆಗೆ ಹೋಗಬೇಕು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಇತರೆ ವಾಹನಗಳ ಮಾರ್ಗ ಬದಲಾವಣೆ:
ಧಾರವಾಡದಿಂದ ಬರುವ ಲಘು ವಾಹನಗಳಿಗೆ ಪ್ರೆಸಿಡೆಂಟ್ ಹೋಟೆಲ್ ಮುಖಾಂತರ ಸಾಯಿನಗರ, ಜೆ.ಕೆ ಸ್ಕೂಲ್, ಗೋಪನಕೊಪ್ಪ ಮೂಲಕ ಕೇಶ್ವಾಪುರ ಅಥವಾ ಕುಸುಗಲ್ ಮೂಲಕ ಹಾಯ್ದು ಹೋಗಬೇಕು.
ಧಾರವಾಡದಿಂದ ಬರುವ ಭಾರಿ ವಾಹನಗಳು ನವನಗರ ಒಳಗೆ ಹಾಯ್ದು ಗಾಮನಗಟ್ಟಿ ಕೈಗಾರಿಕಾ ವಸಾಹತು ಮೂಲಕ ತಾರಿಹಾಳ ಬಪಾಸ್ ಸೇರಬೇಕು.
ನವಲಗುಂದ, ಗದಗ ಕಡೆಯಿಂದ ಬರುವ ಭಾರಿ ವಾಹನಗಳಿಗೆ ನಗರದಲ್ಲಿ ಸಂಚಾರ ನಿಷೇಽಸಲಾಗಿದ್ದು, ರಿಂಗ್ ರಸ್ತೆ ಮೂಲಕ ಸಂಚರಿಸಬೇಕೆಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement