ಕರ್ನಾಟಕ ಕಾಂಗ್ರೆಸ್‌ ಪ್ರಚಾರ ಸಮಿತಿ ವಿವಿಧ ವಿಭಾಗಗಳಿಗೆ ಇನ್ನಷ್ಟು ನಾಯಕರ ನೇಮಕ: ಯಾರೆಲ್ಲ ನೇಮಕ-ಮಾಹಿತಿ ಇಲ್ಲಿದೆ

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್, ಈಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪ್ರಚಾರ ಸಮಿತಿಯ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಅಖಿಲ ಕರ್ನಾಟಕ ಕಾಂಗ್ರೆಸ್‌ನ ಸಂಘಟನೆಯ ಕೋ ಚೇರ್ಮನ್ ಹಾಗೂ ವಿಭಾಗವಾರು ಕೋ ಚೇರ್ ಮನ್​ಗಳನ್ನು ನೇಮಿಸಿದೆ.
ಕೆಪಿಸಿಸಿ ಸಂಘಟನಾ ಕೋ ಚೇರ್ಮನ್ ಆಗಿ ಮಾಜಿ ಸಚಿವ ಬಿ.ಎಲ್.ಶಂಕರ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಬೆಂಗಳೂರು, ಕಲಬುರಗಿ, ಮೈಸೂರು, ಕರಾವಳಿ, ಬೆಳಗಾವಿ, ಮಧ್ಯ ಕರ್ನಾಟಕ ವಿಭಾಗಗಳಿಗೆ ಕೋ ಚೇರ್ಮನ್​ಗಳನ್ನು ನೇಮಕ ಮಾಡಿದೆ. ಇದಲ್ಲದೆ, 32 ಜನರ ಮುಖ್ಯ ಸಂಯೋಜಕರು, ಉಳಿದಂತೆ ಕೋಆರ್ಡಿನೇಟರ್‌ಗಳಾಗಿ 66 ಜನರು, ಜಂಟಿ ಕೋಆರ್ಡಿನೇಟರ್‌ಗಳಾಗಿ 37, ಮಾಧ್ಯಮ ವಿಭಾಗಕ್ಕೆ 9, ಸಾಮಾಜಿಕ ಮಾಧ್ಯಮಕ್ಕೆ 10, ಡಿಸ್ಟ್ರಿಕ್‌ ಚೇರ್ಮನ್‌ಗಳಾಗಿ 29 ಜನರನ್ನು ನೇಮಿಸಲಾಗಿದೆ. (ನೇಮಕದ ಸಂಪೂರ್ಣ ಪಟ್ಟಿಗಾಗಿ ಇಲ್ಲಿರುವ PR_Karnataka_Campaign Committe  ಪಿಡಿಎಫ್‌ ಡೌನ್‌ ಲೋಡ್‌ ಮಾಡಬಹುದು)
ವಿಭಾಗವಾರು ಕೋ ಚೇರ್ಮನ್
ಡಾ.ಶರಣಪ್ರಕಾಶ ಪಾಟೀಲ- ಕಲಬುರಗಿ ವಿಭಾಗ- ಸಂತೋಷ ಲಾಡ್-ಬೆಳಗಾವಿ ವಿಭಾಗ, ರಿಜ್ವಾನ್ ಅರ್ಷದ್-ಬೆಂಗಳೂರು ವಿಭಾಗ, ಡಾ.ಯತೀಂದ್ರ ಸಿದ್ದರಾಮಯ್ಯ -ಮೈಸೂರು ವಿಭಾಗ, ಚಂದ್ರಪ್ಪ ಕರಾಳಿ- ಮಧ್ಯ ಕರ್ನಾಟಕ ವಿಭಾಗ ಹಾಗೂ ಮಂಜುನಾಥ್ ಭಂಡಾರಿ-ಕರಾವಳಿ ವಿಭಾಗಕ್ಕೆ ಕೋ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ.
ಮುಖ್ಯ ಸಂಯೋಜರು
ಶಾಸಕರಾದ ಪ್ರಸಾದ ಅಬ್ಬಯ್ಯ, ನಾಗೇಂದ್ರ, ಆನಂದ ನ್ಯಾಮಗೌಡ, ಅಂಜಲಿ ಲಿಂಬಾಳ್ಕರ, ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ, ರೂಪ ಶಶಿಧರ, ಗಣೇಶ್ ಹುಕ್ಕೇರಿ, ಡಾ.ರಂಗನಾಥ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ, ಗೋವಿಂದರಾಜು, ನಜೀರ್ ಅಹಮ್ಮದ್, ರಾಜೇಂದ್ರ, ಮಾಜಿ ಪರಿಷತ್ ಸದಸ್ಯ ವಿಆರ್ ಸುದರ್ಶನ್, ಮಾಜಿ ಸಚಿವರಾದ ಎ.ಬಿ ಪಾಟೀಲ, ಕಿಮ್ಮನೆ ರತ್ನಾಕರ್, ರಾಣಿ ಸತೀಶ, ಸೋಮಣ್ಣ ಬೇವಿನಮರದ, ಬಿ.ಆರ್‌.ಪಾಟೀಲ ಆಳಂದ, ರಾಮಕೃಷ್ಣ, ರಮೇಶಬಾಬು, ಬಿ.ಎಸ್‌.ಪುಟ್ಟರಾಜ, ಬಸವರಾಜ ಬುಳ್ಳ, ಡಾ.ವಿಜಯಕುಮಾರ, ಎಚ್‌.ಕೆ.ಮಹೇಶ, ಕುಮಾರ ಜೆ.ಎನ್‌.ಆರ್‌. ಜಯರಾಮ, ಸಾಹುಲ್‌ ಹಮೀದ್‌, ಹರ್ಷ ಮೊಯ್ಲಿ, ನಟ ಎಸ್‌.ನಾರಾಯಣ, ರಮೇಶ ಮಾರ್ಗೋಳ, ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ, ಹಾಗೂ ಮರಿಗೌಡ ಒಟ್ಟು 32 ಜನರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಉಳಿದಂತೆ ಕೋಆರ್ಡಿನೇಟರ್‌ಗಳಾಗಿ 66 ಜನರು, ಜಂಟಿ ಕೋಆರ್ಡಿನೇಟರ್‌ಗಳಾಗಿ 37, ಮಾಧ್ಯಮ ವಿಭಾಗಕ್ಕೆ 9, ಸಾಮಾಜಿಕ ಮಾಧ್ಯಮಕ್ಕೆ 10, ಡಿಸ್ಟ್ರಿಕ್‌ ಚೇರ್ಮನ್‌ಗಳಾಗಿ 29 ಜನರನ್ನು ನೇಮಿಸಲಾಗಿದೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement