ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸಗಳಿಗೆ ಜನೇವರಿ ೨೦೨೩ ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ.
ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಂ..ಎ.(ಇಂಗ್ಲಿಷ್) ಎಂ.ಎ.(ಇತಿಹಾಸ), ಎಂ.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸಗಳು ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿಲಿಬ್ ಸೈನ್ಸ್, ಬಿ.ಟಿ.ಎಸ್, ಮುಂತಾದ ಸ್ನಾತಕ ಕೋರ್ಸಗಳು ಡಿಇಸಿಇ, ಡಿಟಎಸ್, ಡಿಎನ್ಎಚ್ಇ ಮುಂತಾದ ಡಿಪ್ಲೋಮಾ ಕೊರ್ಸಗಳು, ಪಿಜಿಡಿಎಚ್ಇ, ಪಿಜಿಡಿಆರ್ಡಿ, ಪಿಜಿಸಿಇಡಿಎಸ್, ಪಿಜಿಡಿಇಡಿಎಸ್, ಪಿಜಿಡಿಇಎಸ್ಡಿ, ಪಿಜಿಡಿಇಎಸ್ಡಿ, ಪಿಜಿಡಿಎಲ್ಎಎನ್, ಮುಂತಾದ ಪಿಜಿ ಡಿಪ್ಲೋಮ ಕೋರ್ಸುಗಳು, ಸಿಟಿಪಿಎಮ್, ಸಿಡಿಎಮ್, ಸಿಇಎಸ್,ಸಿಎಫ್ಎನ್, ಸಿಐಜಿ,ಸಿಆರ್ಡಿ ಮುಂತಾದ ಸರ್ಟಿಪಿಕೇಟ್ ಕೋರ್ಸಗಳು ಅಧ್ಯಯನಕ್ಕೆ ಲಭ್ಯವಿದೆ.
ಇಗ್ನೋ ಜೆ.ಎಸ್.ಎಸ್.ಅಧ್ಯಯನ ಕೇಂದ್ರದಲ್ಲಿ ಸುಮಾರು ೩೮ ವಿವಿಧ ಕೊರ್ಸಗಳು ಅಧ್ಯಯನಕ್ಕೆ ಲಭ್ಯವಿದ್ದು ಜನೇವರಿ ಸಾಲಿನ ಪ್ರವೇಶದ ಕೊನೆಯ ದಿನಾಂಕ ಜನವರಿ 31-01-2023 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಇಗ್ನೋ ಧಾರವಾಡ ಜೆ.ಎಸ್.ಎಸ್. ಅಧ್ಯಯನ ಕೇಂದ್ರ ವಿದ್ಯಾಗಿರಿ, ಧಾರವಾಡ, ಇವರ ದೂರವಾಣಿ : 0836-2468999, 9980292705, 9845304811 ,8951871481 ಸಂರ್ಪಕಿಸಬಹುದು ಪ್ರವೇಶ ಆನ್ ಲೈನ ಮೂಲಕ ಇದ್ದು http://www.ignou.ac.in ನಲ್ಲಿ ಲಭ್ಯವಿದೆ ಎಂದು ಧಾರವಾಡ ಇಗ್ನೋ ಅಧ್ಯಯನ ಕೇಂದ್ರ ಸಂಯೋಜಕರಾದ ಸೂರಜ್ ಜೈನ್ ಅವರು ತಿಳಿಸಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ