ಅಂಬಿಗರ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುತ್ತೇವೆ: ಸಿಎಂ ಬೊಮ್ಮಾಯಿ ಭರವಸೆ

ಹಾವೇರಿ: ಆದಷ್ಟು ಗಂಗಾಮತ ಸಮುದಾಯ (ಅಂಬಿಗ ಸಮುದಾಯ) ವನ್ನು ಎಸ್​ಟಿಗೆ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಜಿಲ್ಲೆಯ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯರ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು, ಅಂಬಿಗರ ಸಮಾಜಕ್ಕೆ ಪರಿಶಿಷ್ಟ ವರ್ಗದ ಮೀಸಲಾತಿ (ST) ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಮಾಜದ ಬೇಡಿಕೆಯನ್ನು ಈಡೇರಿಸಲಾಗುವುದು. ಆದಷ್ಟು ಬೇಗ ಗಂಗಾಮತ ಸಮುದಾಯವನ್ನು ಎಸ್​ಟಿಗೆ ಸೇರಿಸಲಾಗುವುದು ಎಂದರು.
ಪರಿಶಿಷ್ಟ ವರ್ಗದ ಮೀಸಲಾತಿಯಡಿ ಪರಿಗಣಿಸಲು ಈಗಾಗಲೇ ಪ್ರಕ್ರಿಯೆಗಳು ಅಂತಿಮ ಚರಣದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಕೇಂದ್ರದ ಕಾನೂನು ಇಲಾಖೆ ಕೆಲವು ಸ್ಪಷ್ಟೀಕರಣ ಕೇಳಿದೆ. ಇದನ್ನು ರಾಜ್ಯದಿಂದ ಒದಗಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದರು.
ಗಂಗಾಮತ ಪೀಠಕ್ಕೆ 10 ಕೋಟಿ ಕೊಡುವುದಾಗಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.​ ಯಡಿಯೂರಪ್ಪ ಹೇಳಿದ್ದಾರೆ. ಅದರ ಪೈಕಿ ಈಗಾಗಲೇ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಉಳಿದ 5 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಗಂಗಾಮತದ ಜಿಲ್ಲಾ ಸಮುದಾಯ ಭವನಕ್ಕೆ ಈ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಕಠೋರ ಸತ್ಯವನ್ನ ಹೇಳುವಂತ ಶರಣರು ಯಾರಾದರೂ ಇದ್ದರೆ ಅದು ಅಂಬಿಗರ ಚೌಡಯ್ಯ. ಕಲ್ಯಾಣ ಕ್ರಾಂತಿ ಆದಾಗ ವಚನಗಳನ್ನು ದೋಣಿಯಲಿ ಸಾಗಿಸಿ ರಕ್ಷಿಸಿದರು. ಇಂದು ನಾವೆಲ್ಲ ವಚನಗಳನ್ನು ಓದುತ್ತಿದ್ದೇವೆ ಅಂದರೆ ಇದರಲ್ಲಿ ಚೌಡಯ್ಯನವರ ಪಾತ್ರ ಮಹತ್ವದ್ದು ಎಂದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

 

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement