2022ರಲ್ಲಿ ಅತಿ ಹೆಚ್ಚು ವಿವಾಹ ಆಯೋಜಿಸಿದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ : ಮದುವೆ ವೆಚ್ಚಗಳು 2021ಕ್ಕಿಂತ 33%ರಷ್ಟು ಹೆಚ್ಚಳ

ನವದೆಹಲಿ: 2022 ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ಭಾರತೀಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ವೆಡ್ಡಿಂಗ್ ವೈರ್ ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌ನ ವಾರ್ಷಿಕ ವರದಿ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಮುಂಬೈ ಮೂರನೇ ಸ್ಥಾನದಲ್ಲಿದೆ.
ಕೋವಿಡ್‌ ಕಾರಣದಿಂದ ಎರಡು ವರ್ಷಗಳ ವಿರಾಮದ ನಂತರ, ಭಾರತದಲ್ಲಿ ಮತ್ತೆ ಮದುವೆಗಳು ಜೋರಾಗಿ ನಡೆಯುತ್ತಿವೆ. ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, 2022ರಲ್ಲಿ ಭಾರತದಲ್ಲಿ ಹೆಚ್ಚು ಮದುವೆಗಳು ನಡೆದಿವೆ.
ವೆಡ್ಡಿಂಗ್‌ವೈರ್ ಇಂಡಿಯಾ ವೆಡ್ಡಿಂಗ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌ನ ಮಾಹಿತಿಯ ಪ್ರಕಾರ, 2021 ಕ್ಕೆ ಹೋಲಿಸಿದರೆ 2022 ರಲ್ಲಿ ಮದುವೆ ಹುಡುಕಾಟದ ದಟ್ಟಣೆಯು ಶೇಕಡಾ 48.48 ರಷ್ಟು ಹೆಚ್ಚಾಗಿತ್ತು. ಆದರೆ ಇದೇವೇಳೆ 2022 ರಲ್ಲಿ ಮದುವೆಯ ಸರಾಸರಿ ವೆಚ್ಚವೂ ಏರಿದೆ. ದತ್ತಾಂಶವು 2021 ರಲ್ಲಿ ಮದುವೆ ವೆಚ್ಚವು 21 ಲಕ್ಷಕ್ಕೆ ಹೋಲಿಸಿದರೆ 2022 ರಲ್ಲಿ 28 ಲಕ್ಷ ರೂ.ಗಳಿಗೆ ಹೆಚ್ಚಾಗಿದೆ. ಅಂದರೆ 33.33% ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶ ತೋರಿಸಿದೆ.
ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದಾಗಲೂ ಗರಿಷ್ಠ ಸಂಖ್ಯೆಯ ಕುಟುಂಬಗಳು ಅಂದರೆ 60.21%ರಷ್ಟು ಜೋಡಿಗಳು ಮತ್ತು ಕುಟುಂಬಗಳು 100ಕ್ಕಿಂತ ಕಡಿಮೆ ಅತಿಥಿಗಳೊಂದಿಗೆ ಮದುವೆ ಬಯಸಿದ್ದರು ಮತ್ತು ಕೇವಲ 13 ಪ್ರತಿಶತದಷ್ಟು ಜನರು 300 ಕ್ಕೂ ಹೆಚ್ಚು ಅತಿಥಿಗಳ ಜೊತೆ ಮದುವೆಗಳನ್ನು ಆಯೋಜಿಸಿದ್ದರು ಎಂದು ಅಂಕಿಅಂಶ ತೋರಿಸಿದೆ.
21.5 ರಷ್ಟು ಮದುವೆಗಳು ಡಿಸೆಂಬರಿನಲ್ಲಿ ನಡೆದು ಅತ್ಯಂತ ಜನಪ್ರಿಯ ತಿಂಗಳಾಗಿ ಹೊರಹೊಮ್ಮಿದೆ. 2022 ರಲ್ಲಿ ಪ್ರತಿ ಐದು ಮದುವೆಗಳಲ್ಲಿ ಒಂದು ಡಿಸೆಂಬರ್‌ನಲ್ಲಿ ನಡೆದಿದೆ. ಅದರ ನಂತರ ಫೆಬ್ರವರಿಯಲ್ಲಿ (ಶೇ 15.49) ಅತಿ ಹೆಚ್ಚು ಮದುವೆಗಳು ನಡೆದಿವೆ. ಡಿಸೆಂಬರ್ 2 ಅತ್ಯಂತ ಜನಪ್ರಿಯ ವಿವಾಹದ ದಿನಾಂಕವಾಗಿದೆ. 2022ರಲ್ಲಿ ಈ ದಿನ ಅತಿ ಹೆಚ್ಚು ವಿವಾಹಗಳು ನಡೆದಿವೆ.
ದಿನಗಳ ಪರಿಭಾಷೆ ತೆಗೆದುಕೊಂಡರೆ ಭಾನುವಾರ 2022ರಲ್ಲಿ ಮದುವೆಯಾಗಲು ಅತ್ಯಂತ ಜನಪ್ರಿಯ ದಿನವಾಗಿ ಹೊರಹೊಮ್ಮಿದೆ. ಈ ದಿನದಲ್ಲಿ 20 ಪ್ರತಿಶತದಷ್ಟು ಜನರು ಮದುವೆಯಾಗಲು ನಿರ್ಧರಿಸಿದ್ದರು. ಅದರ ನಂತರ ಶುಕ್ರವಾರ (ಶೇ 19.7) ಹೆಚ್ಚು ಮದುವೆಗಳನ್ನು ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ದೆಹಲಿಯು ಭಾರತದ ವಿವಾಹದ ರಾಜಧಾನಿ
ಅಂಕಿಅಂಶಗಳ ಪ್ರಕಾರ, ಗರಿಷ್ಠ ಸಂಖ್ಯೆಯ ವಿವಾಹಗಳನ್ನು ಆಯೋಜಿಸಿದ ಟಾಪ್ 3 ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಬೆಂಗಳೂರು ಮತ್ತು ಮೂರನೇ ಸ್ಥಾನದಲ್ಲಿ ಮುಂಬೈ ನಿಕಟವಾಗಿ ಅನುಸರಿಸಿವೆ. 2020 ರಲ್ಲೂ ದೆಹಲಿಯು ಭಾರತದಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿತ್ತು. ಮತ್ತೊಂದೆಡೆ, ತ್ರಿಪುರಾ, ಸಿಕ್ಕಿಂ ಮತ್ತು ಇಂಫಾಲ್‌ಗಳು ಕಡಿಮೆ ಸಂಖ್ಯೆಯ ವಿವಾಹಗಳನ್ನು ದಾಖಲಿಸಿವೆ.
ಲಕ್ನೋ, ಜೈಪುರ ಮತ್ತು ಗುರ್‌ಗಾಂವ್ ಮದುವೆಗಳಿಗೆ ಅಗ್ರ ಮೂರು ಶ್ರೇಣಿ-2 ನಗರಗಳಾಗಿವೆ ಎಂದು ಡೇಟಾ ಬಹಿರಂಗಪಡಿಸಿದೆ.
ಗಮ್ಯಸ್ಥಾನ ವಿವಾಹಗಳಿಗೆ ಉದಯಪುರವು ಹೆಚ್ಚು ಬೇಡಿಕೆಯ ಸ್ಥಳವಾಗಿದೆ, ನಂತರದ ಸ್ಥಾನದಲ್ಲಿ ಗೋವಾ ಮತ್ತು ಜೈಪುರ ಇವೆ. ಅಂತಾರಾಷ್ಟ್ರೀಯ ನಗರಗಳ ಪೈಕಿ, ಸಿಂಗಾಪುರ, ಅಬುಧಾಬಿ ಮತ್ತು ನ್ಯೂಯಾರ್ಕ್ ನೆಚ್ಚಿನ ವಿವಾಹ ಸ್ಥಳಗಳಾಗಿವೆ.
ಮದುವೆಗೆ ಸ್ಥಳ ನೀಡುವವರು ಅಂದರೆ ಚೌಲ್ಟ್ರಿ ಮಾಲೀಕರು ಹೆಚ್ಚು ಬೇಡಿಕೆಯಲ್ಲಿದ್ದರು ಎಂದು ವರದಿ ಬಹಿರಂಗಪಡಿಸಿದೆ, 29% ಪ್ರತಿಶತದಷ್ಟು ಬುಕಿಂಗ್ ಮಾಡಲಾಗಿದೆ. ನಂತರ ಹೆಚ್ಚು ಬೇಡಿಕೆಯಲ್ಲಿದ್ದವರು ಮದುವೆ ಛಾಯಾಗ್ರಾಹಕರು ಮತ್ತು ಮೇಕಪ್ ಕಲಾವಿದರು. ಅನುಕ್ರಮವಾಗಿ 11% ಮತ್ತು 5% ಬೇಡಿಕೆಯಲ್ಲಿದ್ದರು. ಸ್ಥಳಗಳಿಗೆ ಸಂಬಂಧಿಸಿದಂತೆ, ಬ್ಯಾಂಕ್ವೆಟ್ ಹಾಲ್‌ಗಳು ಹೆಚ್ಚು ಹುಡುಕಲ್ಪಟ್ಟ ಸ್ಥಳಗಳಾಗಿವೆ, ಇದಕ್ಕೆ 56% ರಷ್ಟು ಬೇಡಿಕೆಯಿತ್ತು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement