ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆ ತುಕಡಿ ಮುನ್ನಡೆಸಲಿರುವ ಮಂಗಳೂರಿನ ಹುಡುಗಿ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್

ಮಂಗಳೂರು: ಮಂಗಳೂರಿನವರಾದ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಅವರು ಗಣರಾಜ್ಯೋತ್ಸವದ ದಿನದಿಂದ ನಡೆಯುವ ಪರೇಡ್‌ನಲ್ಲಿ ಭಾರತೀಯ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ ತುಕಡಿಯು 144 ಯುವ ನಾವಿಕರು “ನಾರಿ ಶಕ್ತಿ” ಒಳಗೊಂಡ ಟ್ಯಾಬ್ಲೋವನ್ನು ಹೊಂದಿರುತ್ತದೆ.
29 ವರ್ಷದ ದಿಶಾ ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತಕುಮಾರ್ ಮತ್ತು ಲೀಲಾ ಅಮೃತಕುಮಾರ ದಂಪತಿಯ ಪುತ್ರಿ. ಅವರು ಬಿಎಂಎಸ್‌ (BMS) ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಇಂಜಿನಿಯರಿಂಗ್‌ (ಕಂಪ್ಯೂಟರ್ ಸೈನ್ಸ್) ಪದವಿ ಪಡೆದಿದ್ದಾರೆ. 2008 ರಲ್ಲಿ ಅವರು ಎನ್‌ಸಿಸಿ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು ಮತ್ತು ಅಂದಿನಿಂದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಳ್ಳಬೇಕು ಎಂಬುದು ಅವರ ಕನಸಾಗಿತ್ತು.
ಮತ್ತೊಬ್ಬ ಮಹಿಳಾ ಅಧಿಕಾರಿ ಸಬ್ ಲೆಫ್ಟಿನೆಂಟ್ ವಲ್ಲಿ ಮೀನಾ ಎಸ್. ಜೊತೆಗೆ ಭಾರತೀಯ ನೌಕಾಪಡೆಯ ಗಣರಾಜ್ಯೋತ್ಸವ ತುಕಡಿಯನ್ನು ಮುನ್ನಡೆಸಲು ತಮಗೆ ಸಿಕ್ಕಿರುವ ಅವಕಾಶದ ಕುರಿತು, ದಿಶಾ ಅವರು ಅದನ್ನು ತಾನು ಶಕ್ತಿಯಾಗಿ ನೋಡುತ್ತೇನೆಯೇ ಹೊರತು ಸವಾಲಾಗಿ ಅಲ್ಲ ಎಂದು ಹೇಳಿದ್ದಾರೆ.
ದಿಶಾ 2016 ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡರು ಮತ್ತು 2017 ರಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದರು. ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪ್ರಮುಖ ನೌಕಾ ಸೌಲಭ್ಯದಲ್ಲಿ ಅವರನ್ನು ನೇಮಿಸಲಾಯಿತು. ಅವರು ಡೋರ್ನಿಯರ್ ಏರ್‌ಕ್ರಾಫ್ಟ್‌ಗೆ ಏವಿಯೇಟರ್ ಆಗಿದ್ದಾರೆ ಮತ್ತು ವಿಮಾನದಲ್ಲಿ ವೀಕ್ಷಣೆ ನಡೆಸುತ್ತಾರೆ.

ಪ್ರಮುಖ ಸುದ್ದಿ :-   ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement