ಗೇಮ್‌ ಅಪ್ಲಿಕೇಶನ್‌ ಮೂಲಕ ಪರಸ್ಪರ ಪ್ರೀತಿ, ಮದುವೆ : ಭಾರತಕ್ಕೆ ಬಂದು ಉತ್ತರ ಪ್ರದೇಶದ ಯುವಕನ ಜೊತೆ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಬಂಧನ

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ 19 ವರ್ಷದ ಪಾಕಿಸ್ತಾನಿ ಯುವತಿ ಇಕ್ರಾ ಜೀವನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಉತ್ತರ ಪ್ರದೇಶದ 25 ವರ್ಷದ ಯುವಕನನ್ನು ಮದುವೆಯಾಗಿದ್ದಳು ಎನ್ನಲಾಗಿದ್ದು, ಆತನನ್ನೂ ಬಂಧಿಸಲಾಗಿದೆ.
ಪೊಲೀಸರು ಇಕ್ರಾ ಜೀವನಿಯನ್ನು ಬಂಧಿಸಿ ಎಫ್‌ಆರ್‌ಆರ್‌ಒ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ನಂತರ ಆಕೆಯನ್ನು ಮಹಿಳೆಯರಿಗಾಗಿ ಇರುವ ಸ್ಟೇಟ್‌ ಹೋಂಗೆ ಕಳುಹಿಸಲಾಯಿತು.
ಈಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಗರದ ಮೂಲದವಳು. ಅವರಿಬ್ಬರು ಗೇಮಿಂಗ್ ಆಪ್ ಲುಡೊ ಮೂಲಕ ಪರಸ್ಪರ ಪರಿಚಯವಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ನಂತರ ನೇಪಾಳಕ್ಕೆ ಅವಳನ್ನು ಕರೆಸಿಕೊಂಡಿದ್ದ ಉತ್ತರ ಪ್ರದೇಶದ 25 ವರ್ಷದ ಭದ್ರತಾ ಸಿಬ್ಬಂದಿ ಮುಲಾಯಂ ಸಿಂಗ್ ಯಾದವ್ ಅವಳನ್ನು ಅಲ್ಲಿಯೇ ಮದುವೆಯಾಗಿದ್ದ.

ಪೊಲೀಸರ ಪ್ರಕಾರ, ಇಕ್ರಾ ಜೀವನಿ ಭಾರತ-ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಳು. ಕೆಲವು ತಿಂಗಳ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಕೆಯನ್ನು ನೇಪಾಳಕ್ಕೆ ಕರೆಸಿಕೊಂಡು ಅಲ್ಲಿ ಮದುವೆಯಾಗಿದ್ದರು. ನಂತರ ದಂಪತಿ ಬಿಹಾರದ ಬಿರ್‌ಗುಂಜ್ ಮೂಲಕ ಭಾರತಕ್ಕೆ ಗಡಿ ದಾಟಿ ಬಂದರು ಮತ್ತು ಅಲ್ಲಿಂದ ಪಾಟ್ನಾ ತಲುಪಿದರು.
ಯಾದವ್ ಮತ್ತು ಇಕ್ರಾ ನಂತರ ಬೆಂಗಳೂರಿಗೆ ಬಂದು ಜುನ್ನಸಂದ್ರದ ಬಾಡಿಗೆ ಮನೆಯಲ್ಲಿ ತಂಗಿದ್ದರು, ಅಲ್ಲಿ ಯಾದವ್ ಸೆಪ್ಟೆಂಬರ್ 2022 ರಿಂದ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

ಇಕ್ರಾ ಅವರ ಹೆಸರನ್ನು ರವಾ ಯಾದವ್ ಎಂದು ಬದಲಾಯಿಸಿದ ನಂತರ ಆಧಾರ ಕಾರ್ಡ್‌ ಕೂಡ ಪಡೆದಿದ್ದರು ಮತ್ತು ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇಕ್ರಾ ಪಾಕಿಸ್ತಾನದಲ್ಲಿರುವ ತನ್ನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗ ಕೇಂದ್ರ ಗುಪ್ತಚರ ಸಂಸ್ಥೆಗಳ ಸ್ಕ್ಯಾನರ್ ಅಡಿಯಲ್ಲಿ ಬಂದಿದ್ದಾಳೆ. ಕೇಂದ್ರ ಏಜೆನ್ಸಿಗಳು ಕರ್ನಾಟಕ ಗುಪ್ತಚರ ಇಲಾಖೆಗೆ ಈ ಬಗ್ಗೆ ಎಚ್ಚರಿಕೆ ನೀಡಿವೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ. ಈ ಯುವತಿ ಪಾಕಿಸ್ತಾನಿ ಯಾವುದೇ ಬೇಹುಗಾರಿಕೆ ರಿಂಗ್‌ನ ಭಾಗವಾಗಿದ್ದಾಳೆಯೇ ಎಂದು ಪರಿಶೀಲಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement