ಕರ್ನಾಟಕದ 8 ಸಾಧಕರಿಗೆ ಪದ್ಮ ಪ್ರಶಸ್ತಿ

ಬೆಂಗಳೂರು: 2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದ್ದು, ಕರ್ನಾಟಕದ ಎಂಟು ಜನರಿಗೆ ಪದ್ಮ ಪ್ರಶಸ್ತಿಗಳು ಬಂದಿವೆ. ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಎಸ್‍ಎಲ್ ಭೈರಪ್ಪ (SL Bhyrappa) ಹಾಗೂ ಸುಧಾಮೂರ್ತಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.
ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಐ ಶಾ ರಶೀದ್ ಅಹಮದ್ ಕ್ವಾದ್ರಿ (ಕಲೆ), ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ.
ರಾಣಿ ಮಾಚಯ್ಯ ಕೊಡಗಿನ ಉಮ್ಮತತ್ ಜಾನಪದ ನರ್ತಕಿಯಾಗಿದ್ದು, ಕೊಡವ ಸಂಸ್ಕೃತಿಯನ್ನು ಸಂರಕ್ಷಿಸುವುದನ್ನು ಉತ್ತೇಜಿಸುತ್ತಿದ್ದಾರೆ. ಇವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು.
ಮಡಿಕೇರಿಯ (Madikeri) ನಿವಾಸಿ ರಾಣಿ ಮಾಚಯ್ಯ ಅವರು ಚಿಕ್ಕ ವಯಸ್ಸಿನಿಂದಲೇ ಕೊಡವ ವಾಲಗಕ್ಕೆ ಹೆಜ್ಜೆ ಹಾಕಲು ಪ್ರಾರಂಭಿಸಿದ್ದರು. ಅದಾದ ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ಕೆ.ಎಂ ಕಾರ್ಯಪ್ಪ ಕಾಲೇಜಿಗೆ ಸೇರಿದ್ದಾಗ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಂತರ ತಮ್ಮದೇ ಆದ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ, ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. 1967ರಲ್ಲಿ ಒಂದು ತಂಡ ರಚಿಸಿ ಕೊಡವ ಜಾನಪದ ಲೋಕವನ್ನು ತೆರೆದರು.
ಮುನಿವೆಂಕಟಪ್ಪ: ಅವರು ಚಿಕ್ಕಬಳ್ಳಾಪುರದ ಹಿರಿಯ ತಮಟೆ ವಾದಕ, ತಮಟೆ ಜಾನಪದ ವಾದ್ಯದ ಸಂರಕ್ಷಣೆ ಮತ್ತು ಪ್ರಚಾರಕ್ಕೆ ದಣಿವರಿಯಿಲ್ಲದೆ ಶ್ರಮಿಸುತ್ತಿದ್ದಾರೆ.. ಅವರು 16 ನೇ ವಯಸ್ಸಿನಲ್ಲಿ ಈಗ ತಮಟೆ ನುಡುಸಲು ಪ್ರಾರಂಭಿಸಿದರು. ಯುವ ಮತ್ತು ಮುಂಬರುವ ಕಲಾವಿದರಿಗೆ ತರಬೇತಿ ನೀಡುತ್ತಾರೆ. ಖಾದರ್‌ ವಲ್ಲಿದುಡೇಕುಲ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಮೈಸೂರಿನ ಎಸ್‌. ಸುಬ್ಬರಾವ್‌ ಅವರಿಗೆ ಪ್ರಾಚ್ಯವಸ್ತು ಸಂಶೋಧನೆಗೆ ಪದ್ಮಶ್ರೀ ದೊರೆತಿದೆ. ಬಿದ್ರಿ ಕೆತ್ತನೆಯಲ್ಲಿತೊಡಗಿರುವ ರಾಜ್ಯದ ಕಲಾವಿದ ಶಾ ರಶೀದ್‌ ಅಹ್ಮದ್‌ ಖಾದ್ರಿ ಅವರಿಗೂ ಪದ್ಮಶ್ರೀ ಸಂದಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement