ಗಂಡ-ಹೆಂಡತಿ ಜಗಳದ ವೇಳೆ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ…!

ಲಕ್ನೋ: ತವರು ಮನೆಗೆ ಹೋಗಿದ್ದ ಪತ್ನಿಗೆ ಮನೆಗೆ ಬರುವಂತೆ ಮನವೊಲಿಸಲು ಯತ್ನಿಸಿದ ವೇಳೆ ಹಂಡೆ-ಹೆಂಡತಿ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ಪತ್ನಿಯು ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ವಿಲಕ್ಷಣ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಸಲ್ಮಾ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ತನ್ನ ತವರು ಮನೆಯಲ್ಲಿ ಸ್ವಲ್ಪ ಸಮಯದಿಂದ ಇದ್ದರು.
ಆಗ ಪತಿ ಮುನ್ನಾ ಅವಳನ್ನು ಕರೆತರಲು ಸಲ್ಮಾಳ ತವರು ಮನೆಗೆ ಹೋಗಿದ್ದಾನೆ, ಆದರೆ ಅವಳು ಮನೆಗೆ ಹಿಂತಿರುಗಲು ನಿರಾಕರಿಸಿದ್ದಾಳೆ. ಇದು ದಂಪತಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಜಗಳದ ಸಮಯದಲ್ಲಿ, ಹೆಂಡತಿ ತನ್ನ ಗಂಡನನ್ನು ಹಿಡಿದುಕೊಂಡು ಅವನ ನಾಲಿಗೆಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ನಾಲಿಗೆ ತುಂಡಾಗಿ ನೆಲಕ್ಕೆ ಬೀಳುವಂತೆ ಮಾಡಿದ್ದಾಳೆ…!
ತೀವ್ರ ರಕ್ತಸ್ರಾವವಾಗುತ್ತಿದ್ದ ಮುನ್ನಾ ಕೂಡ ನೆಲಕ್ಕೆ ಬಿದ್ದಿದ್ದು, ನಂತರ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಲ್ಮಾಳನ್ನು ಬಂಧಿಸಲಾಗಿದೆ.
ಪಶ್ಚಿಮ ವಿಭಾಗದ ಎಡಿಸಿಪಿ ಚಿರಂಜೀವ್ ನಾಥ್ ಸಿಂಘಾ ಮಾತನಾಡಿ, ಮುನ್ನಾ ಮತ್ತು ಸಲ್ಮಾ ನಡುವೆ ಹಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಪತ್ನಿ ತನ್ನ ತವರು ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಶುಕ್ರವಾರ, ಪತಿ ಮಕ್ಕಳನ್ನು ಭೇಟಿಯಾಗಲು ಹೆಂಡತಿಯ ತಾಯಿಯ ಮನೆಗೆ ಹೋಗಿದ್ದಾಗ, ಜಗಳದ ಸಮಯದಲ್ಲಿ ಹೆಂಡತಿ ಪತಿಯ ನಾಲಿಗೆಯನ್ನು ಕಚ್ಚಿದ್ದಾಳೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಏಕಕಾಲಕ್ಕೆ ಪ್ರಕರಣದ ತನಿಖೆ ಆರಂಭವಾಗಿದ್ದು, ಆರೋಪಿ ಪತ್ನಿಯನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 'ನ್ಯಾಯ' ವಿಷಯದ ಹೊಸ ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ | ವೀಡಿಯೊ ವೀಕ್ಷಿಸಿ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement