ಅಂಚೆ ಇಲಾಖೆಯಿಂದ 40,889 ಹುದ್ದೆಗಳಿಗೆ ಅರ್ಜಿ ಆಹ್ವಾನ : ಕರ್ನಾಟಕದಲ್ಲೂ 3036 ಹುದ್ದೆಗಳಿಗೆ ನೇಮಕ: ಎಸ್‌ಎಸ್‌ಎಲ್‌ಸಿ ಆದವರು ಅರ್ಜಿ ಅರ್ಜಿ ಸಲ್ಲಿಸಬಹುದು

ಭಾರತೀಯ ಪೋಸ್ಟ್ ಗ್ರಾಮೀಣ ಡಾಕ್‌ ಸೇವಕ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 40,889 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 3036 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (www.indiapostgdsonline.gov.in) ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಮಾಹಿತಿ
ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ)ಡಾಕ್‌ ಸೇವಕ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ-ಜನವರಿ 27, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 16, 2023
ವಿದ್ಯಾರ್ಹತೆ : ಯಾವುದೇ ಮಾನ್ಯತೆ ಪಡೆದ ಭಾರತ ಸರ್ಕಾರ / ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳು ನಡೆಸುವ 10ನೇ ತರಗತಿಯ ಉತ್ತೀರ್ಣವಾಗಿರಬೇಕು. ಸ್ಥಳಿಯ ಭಾಷೆ ಓದಲು ಹಾಗೂ ಬರೆಯಲು ಗೊತ್ತಿರಬೇಕು ಹಾಗೂ ಕಂಪ್ಯೂಟರ್‌ ಜ್ಷಾನ ಇರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 40 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಅಲ್ಲದೆ ಪಿಡಬ್ಲ್ಯುಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯುಡಿ (ಹಿಂದುಳಿದ ವರ್ಗಗಳು) 13 ವರ್ಷಗಳು ಹಾಗೂ ಪಿಡಬ್ಲ್ಯುಡಿ (ಪರಿಶಿಷ್ಟ ಜಾತಿ/ಪಂಗಡಗಳು) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಶುಲ್ಕ: ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ 100 ರೂ.ಶುಲ್ಕವಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ, ಪಿಡಬ್ಲ್ಯುಡಿ ಹಾಗೂ ಮಹಿಳೆಯರಿಗೆ ಶುಲ್ಕ ವಿನಾಯಿತಿ ಇದೆ.
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ವೃತ್ತದ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟಷ್ಟು ಹುದ್ದೆಗಳು ಖಾಲಿ ಇವೆ ಎಂದು ನೋಡಲು ಇಲ್ಲಿ ಕ್ಲಿಕ್‌ https://indiapostgdsonline.cept.gov.in/HomePageS/D11.aspx ಮಾಡಬಹುದು. ಮಾಹಿತಿ ಮತ್ತು ಅರ್ಜಿ ಸಲ್ಲಿಸಬಯಸುವವರು ಅಧಿಕೃತ ವೆಬ್ ಸೈಟ್ http://(www.indiapostgdsonline.gov.in) ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement