ಖ್ಯಾತ ಹರಿಕಥೆ ವಿದುಷಿ ಮಾರ್ಪಳ್ಳಿ ಪದ್ಮಾವತಿ ರಾವ್ ಜನ್ಮ ಶತಮಾನೋತ್ಸವ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಪುತ್ತೂರು: ಪ್ರಸಿದ್ಧ ಹರಿಕಥಾ ವಿದ್ವಾಂಸರಾಗಿದ್ದ ‘ಬಾಲಭಾರತಿ’ ಬಿರುದು ಪಡೆದು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅನೇಕ ಪೌರಾಣಿಕ ಹರಿಕಥೆ ಮಾಡಿದ್ದ ವಿದುಷಿ ಮಾರ್ಪಳ್ಳಿ ಪದ್ಮಾವತಿ ಶಿವರಾಮ ರಾವ್ ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಕೇಂದ್ರ ಸರ್ಕಾರದ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಪುತ್ತೂರಿನ ವಿಭಾಗೀಯ ಅಂಚೆ ಕಚೇರಿಯಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ಅಂಚೆ ಇಲಾಖೆ ಹಿರಿಯ ಅಧಿಕಾರಿ ಡಾ.ಅಂಜೆಲ್ ರಾಜ್ ಅವರು ಈ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷ ಜೀವಂದರ ಜೈನ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ, ಸ್ಥಳೀಯ ಕೊಂಬೆಟ್ಟು ವಾರ್ಡಿನ ಜನಪ್ರತಿನಿಧಿ ಜಗನ್ನಿವಾಸ ರಾವ್ ಅವರು ಹರಿಕಥಾ ವಿದುಷಿ ಮಾರ್ಪಳ್ಳಿ ಪದ್ಮಾವತಿ ರಾವ್ ಅವರ ಪ್ರತಿಭೆ ಮತ್ತು ಸಾಮಾಜಿಕ ಕಳಕಳಿಯನ್ನು ಸ್ಮರಿಸಿಕೊಂಡರು.
ವಿದುಷಿ ಪದ್ಮಾವತಿ ರಾವ್ ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ನಾಲ್ಕನೇ ತಲೆಮಾರಿನ ಮರಿಮಕ್ಕಳು ಕೂಡಾ ಹಾಡುಗಾರಿಕೆ, ಯಕ್ಷಗಾನ, ಭರತನಾಟ್ಯ ಹಾಗೂ ಇನ್ನಿತರ ಕಲೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಪದ್ಯಾಣ ಶಂಕರನಾರಾಯಣ ಭಟ್ಟ, ಪದ್ಯಾಣ ರಮೇಶ ಭಟ್‌, ಪದ್ಮಾವತಿ ರಾವ್ ಅವರ ಹಿರಿಯ ಪುತ್ರ ಗಂಗಾಧರ ರಾವ್ ಮತ್ತು ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಈ ವೇಳೆ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement