ಡಿಕೆಶಿ ಕರ್ನಾಟಕ ಪ್ರದೇಶ ಸಿಡಿ ಕಮೀಟಿ ಅಧ್ಯಕ್ಷ ಎಂದು ಲಖನ್ ಜಾರಕಿಹೊಳಿ ವ್ಯಂಗ್ಯ

ಗೋಕಾಕ: ಸಿಡಿ ಕಾರ್ಖಾನೆ ಬೆಳಗಾವಿಯಲ್ಲಿಯೇ ಇದೆ. ಬೆಳಗಾವಿಯಿಂದ ತಯಾರಾಗಿ ಕನಕಪುರ ಮತ್ತು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತದೆ. 2000ನೇ ಇಸ್ವಿಯಿಂದ ಸಿಡಿ ಕಾರ್ಖಾನೆ ಚಾಲ್ತಿಯಲ್ಲಿದ್ದು, ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ. ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಮಾರ್ಚ್ 3ಕ್ಕೆ ಎರಡು ವರ್ಷ ಆಯ್ತು, ಷಡ್ಯಂತ್ರ ನಡೆದಿದೆ. 2000ನೇ ಇಸವಿಯಿಂದ ಇದು ಇದೆ, ಇದಕ್ಕೆ ಸಿಬಿಐ ತನಿಖೆ ಒಂದೇ ಪರಿಹಾರ ಎಂದರು.
ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ, ಸಿದ್ದರಾಮಯ್ಯ ಇದ್ದಾಗ ಕಾಂಗ್ರೆಸ್ ಬೇರೆ ಇತ್ತು, ಸಿದ್ದರಾಮಯ್ಯ, ಖರ್ಗೆ ಅವರನ್ನು ನಮ್ಮ ಗುರುಗಳು ಎಂದು ಒಪ್ಪುತ್ತೇವೆ. ಆದರೆ ಈಗ ಕಾಂಗ್ರೆಸ್‌ ಬೇರೆಯಾಗಿದೆ. ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣ. ನಾವು ಸಿಂಪಲ್ ಆಗಿಯೇ ಇರುತ್ತೇವೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದಲು ಇದೆ. ಜನ ನಮ್ಮ ಜೊತೆ ಇರುತ್ತಾರೆ ಎಂದು ಹೇಳಿದರು.
ವಿಷಕನ್ಯೆ, ಮಟಾಷ್ ಲೆಗ್, ರಕ್ತ ಕಣ್ಣೀರು ಎಂದು ಜನ ಮಾತನಾಡುತ್ತಾರೆ. ಮಟಾಷ್ ಲೆಗ್ ಅಂದರೆ ಕುಮಾರಸ್ವಾಮಿ ಸರ್ಕಾರ ಹೋಯ್ತು, ಸಮ್ಮಿಶ್ರ ಸರ್ಕಾರ ಆಯ್ತು. ಆಮೇಲೆ ಇದ್ದಿದ್ದು ರಕ್ತ ಕಣ್ಣೀರು ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲಖನ್ ಜಾರಕಿಹೊಳಿ ಹರಿಹಾಯ್ದರು.
ರಮೇಶ ಜಾರಕಿಹೊಳಿಗೆ ಶಕ್ತಿ ಇದೆ ಎಂದು ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರುವವರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಒಂದು ವರ್ಷದಿಂದ ಸಿಬಿಐ ವಹಿಸಬೇಕು ಎಂದು ಇದೆ. ಅನೇಕರು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೇರಳದ ವರೆಗೆ ಇವರ ಲಿಂಕ್ ಇದೆ. ರಮೇಶ ಜಾರಕಿಹೊಳಿ ಅವರಿಗೆ ದಾಖಲೆ ಬಿಡುಗಡೆ ಮಾಡಬೇಡಿ, ಸಿಬಿಐ ಕೊಡಿ ಎಂದು ಹೇಳಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement