ಮೊರ್ಬಿ ಸೇತುವೆ ಕುಸಿತ ಪ್ರಕರಣ: ಒರೆವಾ ಗ್ರೂಪ್ ಎಂಡಿ ಜಯಸುಖ್ ಪಟೇಲ್ ಶರಣಾಗತಿ, 7 ಆರೋಪಿಗಳಿಂದ ಜಾಮೀನಿಗೆ ಅರ್ಜಿ

ಅಹಮದಾಬಾದ್‌: ಮೊರ್ಬಿ ತೂಗುಸೇತುವೆ ಕುಸಿತ ಪ್ರಕರಣದ ಆರೋಪಪಟ್ಟಿಯಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಎಂದು ದಾಖಲಾಗಿರುವ ಒರೆವಾ ಗ್ರೂಪ್‌ನ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ (AMPL) ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಮಂಗಳವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
10 ಮಂದಿ ಆರೋಪಿಗಳಲ್ಲಿ ಪಟೇಲ್ ಕೂಡ ಸೇರಿದ್ದು, ಕೊಲೆಯಲ್ಲದ ಅಪರಾಧಿ ನರಹತ್ಯೆಯ ಆರೋಪ ಎದುರಿಸುತ್ತಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜನವರಿ 13 ರಂದು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಈ ತಿಂಗಳ ಆರಂಭದಲ್ಲಿ, ಪಟೇಲ್ ಬಂಧನದಿಂದ ರಕ್ಷಣೆ ಕೋರಿ ಮೊರ್ಬಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಪ್ರಾಸಿಕ್ಯೂಷನ್ ಸಮಯ ಕೋರಿದ ನಂತರ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಫೆಬ್ರವರಿ 1 ಕ್ಕೆ ಮುಂದೂಡಿತು.
ಏತನ್ಮಧ್ಯೆ, ಪ್ರಕರಣದ ಇತರ ಏಳು ಆರೋಪಿಗಳು ಮಂಗಳವಾರ ಮೊರ್ಬಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹೊಸದಾಗಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದರು. ಇವು ಫೆಬ್ರವರಿ 2 ರಂದು ವಿಚಾರಣೆಗೆ ಬರಲಿವೆ. ಜಾಮೀನಿಗೆ ಜಾಮೀನಿಗೆ ಅರ್ಜಿ ಸಲ್ಲಿಸಿದವರಲ್ಲಿ ಎಎಂಪಿಎಲ್ ವ್ಯವಸ್ಥಾಪಕರಾದ ದೀಪಕ ಪರೇಖ್, ದಿನೇಶಭಾಯ್ ದವೆ, ಟಿಕೆಟ್ ಗುಮಾಸ್ತರಾದ ಮಾದೇವ್ಭಾಯ್ ಸೋಲಂಕಿ ಮತ್ತು ಮನ್ಸುಖ್ಭಾಯ್ ಟೋಪಿಯಾ ಮತ್ತು ಭದ್ರತಾ ಸಿಬ್ಬಂದಿ ಅಲ್ಪೇಶ್ಭಾಯ್ ಗೋಹಿಲ್, ದಿಲೀಪ್ಭಾಯ್ ಗೋಹಿಲ್ ಮತ್ತು ಮುಖೇಶ್ಭಾಯಿ ಚೌಹಾಣ್ ಸೇರಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ಸುರೇಂದ್ರನಗರ ಮೂಲದ ದೇವ್ ಪ್ರಕಾಶ್ ಫ್ಯಾಬ್ರಿಕೇಷನ್ ಸಂಸ್ಥೆಯ ಮಾಲೀಕರಾದ ಪ್ರಕಾಶ್ ಪರ್ಮಾರ್ ಮತ್ತು ದೇವಾಂಗ್ ಪರ್ಮಾರ್ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ಮೊರ್ಬಿ ನ್ಯಾಯಾಲಯವು 2022 ರ ನವೆಂಬರ್‌ನಲ್ಲಿ 9 ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿತ್ತು ಏಕೆಂದರೆ ಆರೋಪಪಟ್ಟಿ ಸಲ್ಲಿಸುವ ಮೊದಲು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನಂತರ ಅವರು ಗುಜರಾತ್ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು ಆದರೆ ಅದನ್ನು ಹಿಂಪಡೆದಿದ್ದರು.
ಅಕ್ಟೋಬರ್ 30 ರಂದು 135 ಜನರ ಸಾವಿಗೆ ಕಾರಣವಾದ ಮೊರ್ಬಿ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304, 308, 114, 336, 337 ಮತ್ತು 338 ರ ಅಡಿಯಲ್ಲಿ ಜನವರಿ 27 ರಂದು ಮೋರ್ಬಿ ಪೊಲೀಸರು 10 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement