ಕೇಂದ್ರ ಬಜೆಟ್‌ 2023 : ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು

ನವದೆಹಲಿ : 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಲಾಗಿದ್ದು, ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಬುಧವಾರ ಕೇಂದ್ರ ಬಜೆಟ್‌-ಮಂಡಿಸಿದ ಅವರು, ಗ್ರೀನ್ ಹೈಡ್ರೋಜನ್ ಮಿಷನ್‌ಗೆ 19,700 ಕೋಟಿ ರೂಪಾಯಿ ಮೀಸಲು. ಹಸಿರು ಕ್ರಾಂತಿಗೆ ಪಿಎಂ ಪ್ರಣಾಂ ಸ್ಕೀಂ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ ಹಾಗೂ ಗೋವರ್ಧನ್ ಯೋಜನೆ ಅಡಿ 200 ಬಯೋಗ್ಯಾಸ್ ಪ್ಲಾಂಟ್, ಅಲ್ಲದೆ, ಜೈವಿಕ ಇಂಧನ, ಜೈವಿಕ ಗೊಬ್ಬರ, ಜೈವಿಕ ಅನಿಲಕ್ಕೆ ಅನುದಾನ, 10 ಸಾವಿರ ಬಯೋ ಇನ್ ಪುಟ್ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದರು.
ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದಿಂದ ಅನುದಾನ ನೀಡಲಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement