ಚಿತ್ರದುರ್ಗ ಸೇರಿ ಭಾರತದ 33 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಆರಂಭ

ಚಿತ್ರದುರ್ಗ: ರಿಲಯನ್ಸ್ ಜಿಯೋ ಕರ್ನಾಟಕದ ಚಿತ್ರದುರ್ಗ ಸೇರಿದಂತೆ ಭಾರತದ 33 ಹೆಚ್ಚುವರಿ ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಇದರೊಂದಿಗೆ, ಭಾರತದ 225 ನಗರಗಳಲ್ಲಿ ಜಿಯೋ ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ನೀಡುತ್ತಿದೆ.
ರಿಲಯನ್ಸ್ ಜಿಯೋ ಚಿತ್ರದುರ್ಗದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ ಈ ಸೇವೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ಕಮ್ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು, ಚಿತ್ರದುರ್ಗ ಮತ್ತು 33 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ, ಇದರೊಂದಿಗೆ 5ಜಿ ಸೇವೆಗಳು ದೊರೆಯುತ್ತಿರುವ ನಗರಗಳ ಒಟ್ಟು ಸಂಖ್ಯೆಯನ್ನು 225 ನಗರಗಳಿಗೆ ಒಯ್ಯುತ್ತೇವೆ. ಬೀಟಾ ಪ್ರಾಯೋಗಿಕ ಅನಾವರಣವಾದ ಕೇವಲ 120 ದಿನಗಳಲ್ಲಿ ಜಿಯೋ ಈ ಮೈಲುಗಲ್ಲನ್ನು ಸಾಧಿಸಿದೆ ಮತ್ತು 2023ರ ಡಿಸೆಂಬರ್ ವೇಳೆಗೆ ಪರಿವರ್ತನೆಯ ಜಿಯೋ ಟ್ರೂ 5ಜಿ ಸೇವೆಗಳೊಂದಿಗೆ ಇಡೀ ರಾಷ್ಟ್ರವನ್ನು ಸಂಪರ್ಕಿಸುವ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement