ಕರ್ನಾಟಕ, ಅಲಹಾಬಾದ್, ಮದ್ರಾಸ್ ಹೈಕೋರ್ಟ್‌ಗಳಿಗೆ 13 ಹೆಚ್ಚುವರಿ ನ್ಯಾಯಾಧೀಶರ ನೇಮಕ

ನವದೆಹಲಿ: ಕರ್ನಾಟಕ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ಈ ಮೂರು ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಾಧೀಶರಾಗಿ ಹದಿಮೂರು ನ್ಯಾಯಾಧೀಶರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ವಿಜಯಕುಮಾರ್ ಆದಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗಲ್ಲ ಅವರನ್ನು ಹೆಚ್ಚುವರಿ ನ್ಯಾಯಾಧೀಶರಾಗಿ ಎರಡು ವರ್ಷಗಳ ಕಾಲ ಸರ್ಕಾರ ನೇಮಿಸಿದೆ.
ಸೈಯದ್ ಕಮರ್ ಹಸನ್ ರಿಜ್ವಿ, ಮನೀಶ್ ಕುಮಾರ್ ನಿಗಮ್, ಅನೀಶ್ ಕುಮಾರ್ ಗುಪ್ತಾ, ನಂದ ಪ್ರಭಾ ಶುಕ್ಲಾ, ಕ್ಷಿತಿಜ್ ಶೈಲೇಂದ್ರ ಮತ್ತು ವಿನೋದ್ ದಿವಾಕರ್ – ಎರಡು ವರ್ಷಗಳ ಅವಧಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಮದ್ರಾಸ್ ಹೈಕೋರ್ಟ್‌ಗೆ ಸಂಬಂಧಿಸಿದಂತೆ ವಕೀಲರಾದ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ, ಪಿಳ್ಳೈಪಾಕ್ಕಂ ಬಹುಕುಟುಂಬಿ ಬಾಲಾಜಿ ಮತ್ತು ಕಂದಸಾಮಿ ಕುಳಂದೈವೇಲು ರಾಮಕೃಷ್ಣನ್ ಅವರನ್ನು ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ, ಇದರ ಜೊತೆಗೆ, ಇಬ್ಬರು ನ್ಯಾಯಾಂಗ ಅಧಿಕಾರಿಗಳಾದ ರಾಮಚಂದ್ರನ್ ಕಲೈಮತಿ ಮತ್ತು ಕೆ. ಗೋವಿಂದರಾಜನ್ ತಿಲಕವಾಡಿ ಅವರ ಮದ್ರಾಸ್ ಹೈಕೋರ್ಟ್ ಪೀಠಕ್ಕೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement