ದೆಹಲಿ ಶ್ರದ್ಧಾ ವಾಕರ್‌ ಕೊಲೆ ಪ್ರಕರಣ : ಗ್ರೈಂಡರ್‌ನಲ್ಲಿ ಮೂಳೆಗಳನ್ನು ಸಣ್ಣಗೆ ಪುಡಿ ಮಾಡಿ ಎಸೆದಿದ್ದ-ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನವದೆಹಲಿ: ಅಫ್ತಾಬ್ ಪೂನಾವಾಲಾ ತನ್ನ ಲಿವ್‌ ಇನ್ ಪಾರ್ಟ್ನರ್‌ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ ನಂತರದಲ್ಲಿ ಮೂಳೆಗಳನ್ನು ಕಲ್ಲು ಗ್ರೈಂಡರ್ ಬಳಸಿ ಪುಡಿ ನಂತರ ಅದನ್ನು ಸಮೀಪದ ಕಾಡಿನಲ್ಲಿ ಎಸೆದಿದ್ದ. ಮೂರು ತಿಂಗಳ ನಂತರ ಆತ ಎಸೆದ ಕೊನೆಯ ತುಣುಕುಗಳಲ್ಲಿ ಆಕೆಯ ತಲೆಯೂ ಒಂದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ದೆಹಲಿಯಲ್ಲಿನ ಕುಖ್ಯಾತ ಫ್ರಿಜ್ ಕೊಲೆಯ 6,600 ಪುಟಗಳ ಚಾರ್ಜ್‌ಶೀಟ್ ಭಯಾನಕ ಕೊಲೆಯ ವಿವರಗಳ ಸರಣಿಯನ್ನು ಪಟ್ಟಿಮಾಡಿದೆ. ಮೇ 18ರಂದು, ಶ್ರದ್ಧಾ ಅವರನ್ನು ಕೊಂದ ನಂತರ, ಅಫ್ತಾಬ್‌ ಪೂನಾವಾಲಾ ಜೊಮಾಟೊದಿಂದ ತಂದ ಚಿಕನ್ ರೋಲ್‌ನಲ್ಲಿ ಊಟ ಮಾಡಿದ್ದರು ಎಂದು ಸಹ ಚಾರ್ಜ್‌ ಶೀಟ್‌ ಉಲ್ಲೇಖಿಸುತ್ತದೆ.
ಕೊಲೆ ಮಾಡಿದ ನಂತರ ಮೊದಲಿಗೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿಲೇವಾರಿ ಮಾಡಲು ಯೋಚಿಸಿದ್ದ ಎಂದು ಆರೋಪಪಟ್ಟಿ ಹೇಳುತ್ತದೆ. ಅದಕ್ಕಾಗಿ ಆತ ಒಂದು ಚೀಲ ಸಹ ಖರೀದಿಸಿದ್ದ, ಆದರೆ ಹಾಗೆ ಮಾಡಿದರೆ ತಕ್ಷಣ ಸಿಕ್ಕಿಬೀಳುವ ಬಗ್ಗೆ ಆಲೋಚನೆ ಮಾಡಿ ಆ ಯೋಚನೆ ಕೈಬಿಟ್ಟ. ಅಂತಿಮವಾಗಿ, ಶ್ರದ್ಧಾ ದೇಹವನ್ನು ಕತ್ತರಿಸಲು ನಿರ್ಧರಿಸಿದ ಮತ್ತು ಅದಕ್ಕಾಗಿ ಗರಗಸ, ಸುತ್ತಿಗೆ ಮತ್ತು ಮೂರು ಚಾಕುಗಳನ್ನು ಖರೀದಿಸಿದ. ವಿಶೇಷವಾಗಿ ಬೆರಳುಗಳನ್ನು ಬೇರ್ಪಡಿಸಲು ಬ್ಲೋ ಟಾರ್ಚ್ ಬಳಸಬೇಕಾಯಿತು ಎಂದು ಚಾರ್ಜ್‌ ಶೀಟ್‌ ಹೇಳುತ್ತದೆ.
35 ತುಂಡುಗಳಾಗಿ ಕತ್ತರಿಸಿದ ದೇಹವನ್ನು ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು. ಪೂನಾವಾಲಾ ತನ್ನ ಗೆಳತಿಯರು ಭೇಟಿ ನೀಡಿದಾಗಲೆಲ್ಲ ಫ್ರಿಡ್ಜ್‌ನಿಂದ ಪೊಟ್ಟಣಗಳನ್ನು ತೆಗೆದುಕೊಂಡು ಅಡುಗೆಮನೆಯಲ್ಲಿ ಇಡುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಕೊಲೆಯ ನಂತರ ಆತ ಶ್ರದ್ಧಾ ವಾಲ್ಕರ್ ಮೊಬೈಲ್ ಸಹ ಇಟ್ಟುಕೊಂಡಿದ್ದ. ಮೇ 18ರ ನಂತರ ಆಕೆಯ ಖಾತೆಯು ಆತನ ಫೋನ್‌ನಿಂದ ಚಾಲನೆಯಾಗುತ್ತಿದೆ ಎಂದು ಗೂಗಲ್ ಡೇಟಾ ಬಹಿರಂಗಪಡಿಸಿದೆ. ನಂತರ ಮುಂಬೈನಲ್ಲಿ ಆಕೆಯ ಸೆಲ್‌ಫೋನ್ ಮತ್ತು ಲಿಪ್‌ಸ್ಟಿಕ್ ಅನ್ನು ವಿಲೇವಾರಿ ಮಾಡಿದ್ದಾನೆ ಎಂದು ಆರೋಪಪಟ್ಟಿ ಹೇಳುತ್ತದೆ.
ಶ್ರದ್ಧಾ ವಾಕರ್ ದೇಹದ 20 ಕ್ಕಿಂತ ಕಡಿಮೆ ತುಂಡುಗಳು ಪತ್ತೆಯಾಗಿವೆ. ತಲೆ ಇನ್ನೂ ಪತ್ತೆಯಾಗಿಲ್ಲ. ಕಳೆದ ವರ್ಷಾಂತ್ಯದಲ್ಲಿ ನಡೆದ ಪಾಲಿಗ್ರಾಫ್ ಮತ್ತು ನಾರ್ಕೋ-ಅನಾಲಿಸಿಸ್ ಪರೀಕ್ಷೆಗಳಲ್ಲಿ ಆಫ್ತಾಬ್ ಪೂನಾವಾಲಾ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ಅದಕ್ಕೆ ಪಶ್ಚಾತ್ತಾಪಪಟ್ಟಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement