ಕಲಬುರಗಿ: ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಂಡರ್ ವೇರ್ ನಲ್ಲಿ 5 ಕೆಜಿ ತೂಕದ ಕಲ್ಲು, ಸರಪಳಿ ಕಟ್ಟಿಕೊಂಡು ಬಂದು ಸಿಕ್ಕಿಬಿದ್ದರು …!

ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣ ಬಯಲಾಗಿದ್ದು ಕಲಬುರಗಿಯಲ್ಲಿ ‌ಮತ್ತೊಂದು ಪ್ರಕರಣಗಳ ಬೆಳಕಿಗೆ ಬಂದಿದೆ. ಕಲ್ಯಾಣ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಭೌತಿಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿರುವುದು ವರದಿಯಾಗಿದೆ.
ಕೆಕೆಆರ್‌ಟಿಸಿ ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ಭೌತಿಕ ಪರೀಕ್ಷೆಯಲ್ಲಿ ವಾಮಮಾರ್ಗ ಕಂಡುಕೊಂಡ ಅಭ್ಯರ್ಥಿಗಳು ನೇಮಕಾತಿ ವೇಳೆ ತಮ್ಮ ತೂಕ ಹೆಚ್ಚಿಸಿಕೊಳ್ಳಲು ಕಾಲಿಗೆ ಕಬ್ಬಿಣ ವಸ್ತುಗಳನ್ನು ಕಟ್ಟಿಕೊಂಡು ಬಂದು ಸಿಕ್ಕಿಬಿದ್ದಿದ್ದಾರೆ. 5 ಕೆಜಿ ಹಾಗೂ 10 ಕೆಜಿ ತೂಕದ ಕಬ್ಬಿಣದ ತುಂಡುಗಳನ್ನು ಕೆಲವರು ತೊಡೆಗೆ ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ಅಂಡರ್ ವೇರ್ ನಲ್ಲಿ ಇಟ್ಟುಕೊಂಡು ಅದರ ಮೇಲೆ ಪ್ಯಾಂಟ್‌ ಧರಿಸಿಕೊಂಡು ಬಂದು ಪರೀಕ್ಷೆಗೆ ಹಾಜರಾಗಿದ್ದಾರೆ…! ಆದರೆ, ತಪಾಸಣೆ ವೇಳೆಯಲ್ಲಿ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 1619 ಜನ ಕಂಡಕ್ಟರ್ ಕಂ ಡ್ರೈವರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಹಾಕಿದವರಿಗೆ ದೇಹದಾರ್ಡ್ಯ ಪರೀಕ್ಷೆ ಕಡ್ಡಾಯವಾಗಿದೆ. ಚಾಲಕ ಕಂ ನಿರ್ವಾಹಕ ಹುದ್ದೆಗೆ 163 ಸೆಂಟಿ ಮೀಟರ್ ಎತ್ತರ ಮತ್ತು 55 ಕಿಲೋ ತೂಕ ಅಭ್ಯರ್ಥಿಗಳು ಹೊಂದಿರಬೇಕು. ಹೀಗಾಗಿ ಕಲಬುರಗಿ ನಗರದ ಕೆಕೆಆರ್​ಟಿಸಿ ಕೇಂದ್ರ ಕಚೇರಿ ಪಕ್ಕದಲ್ಲಿ ಕೆಲ ದಿನಗಳಿಂದ ಪರೀಕ್ಷೆ ನಡೆಯುತ್ತಿದೆ.
ಕಡಿಮೆ ತೂಕ ಇರುವವರು ತೂಕ ಹೆಚ್ಚಿಸಿಕೊಳ್ಳಲು ಕಬ್ಬಿಣದ ಪಟ್ಟಿ, ಸರಪಳಿ ಹಾಗೂ ಒಳಉಡುಪುಗಳಲ್ಲಿ 5 ರಿಂದ 10 ಕೆಜಿ ತೂಕದ ಕಲ್ಲುಗಳನ್ನು ಕಲ್ಲು ಕಟ್ಟಿಕೊಂಡು ಬಂದಿದ್ದರು. ಹೀಗೆ ಬಂದ ನಾಲ್ವರ ಕಳ್ಳಾಟವನ್ನು ಪತ್ತೆ ಹಚ್ಚುವಲ್ಲಿ ಸಾರಿಗೆ ಸಂಸ್ಥೆಯ ನೇಮಕಾತಿ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement