ಆಲ್ ಖೈದಾ ಜೊತೆ ನಂಟು ಆರೋಪ: ಬೆಂಗಳೂರಿನಲ್ಲಿ ಓರ್ವನ ಬಂಧನ

ಬೆಂಗಳೂರು : ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಬೆಂಗಳೂರಿನಲ್ಲಿ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಥಣಿಸಂದ್ರದ ಮಂಜುನಾಥ ನಗರದಲ್ಲಿ ಐಎಸ್ ​ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಆರೀಫ್​ ಎಂಬಾತನನ್ನು ಬಂಧಿಸಿದ್ದಾರೆ. ಶಂಕಿತ ಉಗ್ರ ಆರೀಫ್ ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕಿಸಲಾಗಿದೆ. ಈತ ಕಳೆದ 2 ವರ್ಷಗಳಿಂದ ಅಲ್​ಖೈದಾ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಧಣೀಸಂದ್ರದಲ್ಲಿ ಐಎಸ್‍ಡಿ ಹಾಗೂ ಎನ್‍ಐಎ ಅಧಿಕಾರಿಗಳು ಇಂದು (ಶನಿವಾರ) ಬೆಳಗ್ಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ವರ್ಕ್ ಫ್ರಾಂ ಹೋಮ್ ಮೂಲಕ ಮನೆಯಲ್ಲೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಜೋರಾಗಿ ಮಳೆ; ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement